ಬೆಂಗಳೂರು ಮಂದಿಗೆ ಶಾಕ್ ಮೇಲೆ ಶಾಕ್: ಯುಗಾದಿ ಹಬ್ಬಕ್ಕೆ ಆಟೋ ಪ್ರಯಾಣ ದರ ಏರಿಕೆ?

Untitled design 2025 03 25t130736.760

ಬೆಂಗಳೂರು ನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ದರ ಏರಿಕೆಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಹಾಲಿನ ದರ, ವಿದ್ಯುತ್ ದರ, ಮೆಟ್ರೋ ದರ ಏರಿಕೆಗಳ ನಂತರ, ಇದೀಗ ಆಟೋ ಪ್ರಯಾಣ ದರ ಕೂಡಾ ಹೆಚ್ಚಾಗಲಿದ್ದು, ಇದರಿಂದ ಸಿಲಿಕಾನ್‌ ಸಿಟಿ ಮಂದಿಗೆ ಮತ್ತೊಂದು ಆಘಾತ ತಂದಿದೆ. 

ಯುಗಾದಿ ಹಬ್ಬದ ಹೊತ್ತಿನಲ್ಲಿ ಆಟೋ ಚಾಲಕರಿಗೆ ಸಿಹಿ, ಪ್ರಯಾಣಿಕರಿಗೆ ಕಹಿ ನೀಡುವಂತೆ ಆಟೋ ದರ ಏರಿಕೆಯ ಪ್ರಸ್ತಾಪ ಮಾಡಲಾಗಿದೆ. ಆಟೋ ಚಾಲಕರ ಸಂಘಟನೆಗಳು ತಮ್ಮ ಬದುಕು ಸಾಗಿಸಲು ಅಗತ್ಯವಾದ ವೇತನ ಹೆಚ್ಚಳದ ದೃಷ್ಟಿಯಿಂದ ದರ ಹೆಚ್ಚಳಕ್ಕೆ ಒತ್ತಾಯಿಸುತ್ತಿವೆ. ಬೆಂಗಳೂರು ನಗರ ಡಿಸಿ ಕಾರ್ಯಾಲಯದಲ್ಲಿ ಈ ಕುರಿತು ಚರ್ಚೆಗಳು ನಡೆದಿದ್ದು, ಶೀಘ್ರದಲ್ಲೇ ದರ ಏರಿಕೆಯ ಬಗ್ಗೆ ಅಧಿಕೃತ ಘೋಷಣೆ ಹೊರಬರುವ ನಿರೀಕ್ಷೆಯಿದೆ.

ADVERTISEMENT
ADVERTISEMENT
ಆಟೋ ದರ ಏರಿಕೆಯ ಹಿನ್ನೆಲೆ:

ಕೆಲ ದಿನಗಳ ಹಿಂದೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಸಭೆಯಲ್ಲಿ ಆಟೋ ಪ್ರಯಾಣ ದರ ಏರಿಕೆಗೆ ಅನುಮತಿ ನೀಡಲಾಗಿದ್ದು, ಡಿಸಿ ಜಗದೀಶ್ ಅವರ ಅಂಕಿತ ಬಾಕಿಯಾಗಿದೆ. ಏಪ್ರಿಲ್ ತಿಂಗಳಿನಿಂದಲೇ ಈ ದರ ಏರಿಕೆ ಆಗಬಹುದೆಂಬ ಸೂಚನೆ ನೀಡಲಾಗಿದೆ. ಆಟೋ ಚಾಲಕರು ಕನಿಷ್ಠ ದರವನ್ನು 30 ರೂ.ಯಿಂದ 40 ರೂ.ಗೆ ಏರಿಸಲು ಪಟ್ಟು ಹಿಡಿದಿದ್ದು, ಪ್ರತಿ ಕಿಲೋಮೀಟರ್‌ಗೆ 15 ರೂ.ನಿಂದ 20 ರೂ.ಗೆ ಹೆಚ್ಚಳ ಮಾಡುವಂತೆ ಆಗ್ರಹಿಸುತ್ತಿದ್ದಾರೆ.

ದೈನಂದಿನ ಸಂಚಾರಕ್ಕೆ ಆಟೋಗಳನ್ನು ಅವಲಂಬಿಸುವ ವಿದ್ಯಾರ್ಥಿಗಳು, ಕೆಲಸಗಾರರು, ಮತ್ತು ಸಣ್ಣ ವ್ಯಾಪಾರಸ್ಥರು ಈ ದರ ಏರಿಕೆಯಿಂದ ಹೆಚ್ಚು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.

ಹಾಲಿನ ದರ ಏರಿಕೆ:

ನಂದಿನಿ ಹಾಲಿನ ದರ ಏರಿಕೆ ಕೂಡಾ ಚರ್ಚೆಯಲ್ಲಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಇದರ ಕುರಿತು ತೀವ್ರ ಚಿಂತನೆ ನಡೆಸುತ್ತಿದ್ದು, ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಹೆಚ್ಚಿಸಲು ಒತ್ತಾಯಿಸಲಾಗಿದೆ. ಈ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ನಿರ್ಧರಿಸಲ್ಪಡಲಿದೆ.

Exit mobile version