ಬೆಂಗಳೂರು: 2014 ರಿಂದ ಇಲ್ಲಿವರೆಗೂ ನೀರಿದ ದರ ಹೆಚ್ಚು ಮಾಡಿಲ್ಲ. ಇದರಿಂದ ಒಂದು ಸಾವಿರ ಕೋಟಿ ವರ್ಷಕ್ಕೆ ಲಾಸ್ ಆಗ್ತಿದೆ. ಒಂದು ಪೈಸಾ ಆದರೂ ಹೆಚ್ಚು ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನ ಪರಿಷತ್ ನಲ್ಲಿ ಶೂನ್ಯವೇಳೆಯ ಚರ್ಚೆಯಲ್ಲಿ ನೀರಿನ ಟ್ಯಾಂಕರ್ ಬಗ್ಗೆ ರಾಮೋಜಿ ರಾವ್ ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರ ನೀಡಿದರು.
ನೀರಿನ ಟ್ಯಾಂಕರ್ ಗಳ ದರ ಹೆಚ್ಚಾಗುತ್ತಿದೆ. ಕೆಲವು ಬಡಾವಣೆಗಳಲ್ಲಿ ನೀರಿನ ಪೂರೈಕೆ ಆಗುತ್ತಿಲ್ಲ ಖಾಸಗಿ ನೀರಿನ ಟ್ಯಾಂಕರ್ ಗಳು ದುಟ್ಪಟ್ಟು ದರವನ್ನ ಬೇಡಿಕೆ ಇಡುತ್ತಿವೆ ಉಚಿತ ನೀರಿನ ಟ್ಯಾಂಕರ್ ಗಳನ್ನ ತುರ್ತಾಗಿ ವ್ಯವಸ್ಥೆ ಮಾಡಿ ಎಂಬ ಪ್ರಶ್ನೆ ಉತ್ತರ ನೀಡಿದ ಡಿಕೆ ಶಿವಕುಮಾರ್, ಸೂಕ್ತ ಕಾಲದಲ್ಲಿ ಸೂಕ್ತ ಪ್ರಶ್ನೆ ಕೇಳಿದ್ದಾರೆ.
ಕಳೆದ ವರ್ಷ 7000 ಬೋರ್ವೆಲ್ ಗಳು ಡ್ರೈ ಆಗಿತ್ತು. ನಾನು ಕಳೆದ ವರ್ಷ ಇದಕ್ಕೆ ಬ್ರೇಕ್ ಹಾಕಿದ್ದೆ. ಈಗ ಇದರ ಬಗ್ಗೆ ಒಂದು ತಿಂಗಳು ಕ್ಯಾಂಪೇನ್ ಮಾಡಲು ನಿರ್ಧಾರ ಮಾಡಿದ್ದೇವೆ. ಕಳೆದ ವರ್ಷ ಅಪಾಟ್ರ್ಮೆಂಟ್‌ನವರು ಬಿಡಬ್ಲ್ಯೂಎಸ್‌ಎಸ್‌ಬಿಗೆ ದುಡ್ಡು ಕಟ್ಟಿಲ್ಲ ಎಂದರು.
2014 ರಿಂದ ಇಲ್ಲಿವರೆಗೂ ವಾಟರ್ ಪ್ರೈಜ್ ಹೆಚ್ಚು ಮಾಡಿಲ್ಲ. ಒಂದು ಪೈಸಾ ಆದರೂ ಹೆಚ್ಚು ಮಾಡಬೇಕು. ಒಂದು ಸಾವಿರ ಕೋಟಿ ವರ್ಷಕ್ಕೆ ಲಾಸ್ ಆಗ್ತಿದೆ. ಇದಕ್ಕಾಗಿ ಬೆಂಗಳೂರು ನಗರದ ಎಲ್ಲ ಶಾಸಕರನ್ನ ಸಭೆ ಕರೆಯುತ್ತೇನೆ. ಟ್ಯಾಂಕರ್ ನೀರಿನ ಕಂಟ್ರೋಲ್ ತೆಗೆದುಕೊಳ್ಳುತ್ತೇವೆ. ಖಾಸಗಿ ಟ್ಯಾಂಕರ್ ಗಳಿಗೂ ಮಿನಿಮಮ್ ರೇಟ್ ಫಿಕ್ಸ್ ಮಾಡುತ್ತಿದ್ದೇವೆ ಎಂದರು.
ನೀರಿನ ದರ ಏರಿಕೆಗಾಗಿ ಏಳು ಪೈಸೆ ದರ ಏರಿಕೆ ಪ್ರಸ್ತಾಪ ಬಂದಿದೆ. ಆದರೆ ಅದು ಜಾಸ್ತಿ ಆಗುತ್ತದೆ ಅಂತ ಒಂದು ಪೈಸೆ ದರ ಏರಿಕೆ ಮಾಡುತ್ತೇವೆ. ಬಜೆಟ್ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಟ್ಯಾಂಕರ್ ನೀರು ಬೇರೆ ಬೇರೆ ಕೆಲಸಗಳಿಗೆ, ವಾಹನ ತೊಳೆಯುವುದಕ್ಕೆ ಬಳಕೆ ಮಾಡ್ತಿದ್ದಾರೆ. ಅದಕ್ಕೆಲ್ಲ ಬ್ರೇಕ್ ಹಾಕಲು ಒಂದು ತಿಂಗಳ ಕಾಲ ಕ್ಯಾಂಪೇನ್ ಮಾಡೋಣ ಎಂದುಕೊಂಡಿದ್ದೇನೆ. ನೀವೆಲ್ಲರೂ ಸಹಕಾರ ನೀಡಬೇಕು ಎಂದರು.
ದುರ್ಗೇಶ್ ನಾಯಿಕ, ಪೊಲಿಟಿಕಲ್ ಬ್ಯೂರೋ, ಗ್ಯಾರಂಟಿ ನ್ಯೂಸ್ ಬೆಂಗಳೂರು