ಬೆಂಗಳೂರು, ಏಪ್ರಿಲ್ 18: ರಾಜ್ಯದ ಹಲವೆಡೆ ವಾತಾವರಣದಲ್ಲಿ ಬದಲಾವಣೆ ಕಂಡುಬಂದಿದ್ದು, ಇಂದು ಸಂಜೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ತಾಪಮಾನದಲ್ಲಿ ಕೂಡಾ ಇಳಿಕೆ ಕಂಡುಬಂದಿದೆ.
ಬೆಂಗಳೂರು ಸೇರಿದಂತೆ ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಕೆಲವು ಪ್ರದೇಶಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ.
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ
ಹೊಸಕೋಟೆ, ಬೆಳ್ಳೂರು, ಹುಣಸೂರು, ಮದ್ದೂರು, ಸರಗೂರು, ಕೃಷ್ಣರಾಜಪೇಟೆ, ದುರ್ಗ, ಚನ್ನರಾಯಪಟ್ಟಣ, ಬೆಂಗಳೂರು ಎಚ್‌ಎಎಲ್, ನಾಗಮಂಗಲ, ಬೆಂಗಳೂರು ನಗರ, ರಾಯಲ್ಪಾಡು, ಮೊಳಕಾಲ್ಮೂರು, ಹೆಸರಘಟ್ಟ, ಹೊಸದುರ್ಗ, ಟಿಜಿ ಹಳ್ಳಿ, ಕೋಲಾರ, ಶಿರಹಟ್ಟಿ, ಜೇವರ್ಗಿ, ಲಕ್ಷ್ಮೇಶ್ವರದಲ್ಲಿ ಈಗಾಗಲೇ ಮಳೆಯಾಗಿದೆ. ಇವುಗಳ ಪೈಕಿ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಜೋರಾದ ಮಳೆಯೂ ಕಂಡುಬಂದಿದೆ.
ರಾಜ್ಯದ ಈ ಜಿಲ್ಲೆಗಳಲ್ಲಿ ಬಿಸಿಲ ತಾಪಮಾನ ಇಳಿಕೆ
ದಕ್ಷಿಣ ಕನ್ನಡ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಇಂದೂ ಕೂಡ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಬಿಸಿಲ ತಾಪಮಾನದಲ್ಲಿ ಇಳಿಕೆಯು ಕಂಡುಬಂದಿದ್ದು, ಜನರಿಗೆ ತಂಪಾದ ವಾತಾವರಣದ ಅನುಭವವಾಗಿದೆ.
ಉಷ್ಣಾಂಶದ ವಿವರಗಳು
ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 32.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ಉಷ್ಣಾಂಶ 20.4 ಡಿಗ್ರಿ ಸೆಲ್ಸಿಯಸ್ ಆಗಿದೆ. ಬೆಂಗಳೂರು ಎಚ್‌ಎಎಲ್‌ನಲ್ಲಿ 33.1 ಡಿಗ್ರಿ ಗರಿಷ್ಠ ಮತ್ತು 18.7 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಕೆಐಎಎಲ್‌ನಲ್ಲಿ 33.8 ಡಿಗ್ರಿ ಗರಿಷ್ಠ ಮತ್ತು 20.4 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಜಿಕೆವಿಕೆಯಲ್ಲಿ 33.4 ಡಿಗ್ರಿ ಗರಿಷ್ಠ ಹಾಗೂ 19.6 ಡಿಗ್ರಿ ಕನಿಷ್ಠ ಉಷ್ಣಾಂಶವನ್ನು ದಾಖಲಿಸಲಾಗಿದೆ.
ಇತರ ಪ್ರಮುಖ ನಗರಗಳ ತಾಪಮಾನ
-
ಕಲಬುರಗಿ: 40.8 ಡಿಗ್ರಿ ಗರಿಷ್ಠ, 26.0 ಡಿಗ್ರಿ ಕನಿಷ್ಠ
-
ಬೀದರ್: 39.4 ಡಿಗ್ರಿ ಗರಿಷ್ಠ, 23.2 ಡಿಗ್ರಿ ಕನಿಷ್ಠ
-
ವಿಜಯಪುರ: 39.2 ಡಿಗ್ರಿ ಗರಿಷ್ಠ, 22.4 ಡಿಗ್ರಿ ಕನಿಷ್ಠ
-
ಬಾಗಲಕೋಟೆ: 38.6 ಡಿಗ್ರಿ ಗರಿಷ್ಠ, 24.7 ಡಿಗ್ರಿ ಕನಿಷ್ಠ
-
ಧಾರವಾಡ: 36.0 ಡಿಗ್ರಿ ಗರಿಷ್ಠ, 21.4 ಡಿಗ್ರಿ ಕನಿಷ್ಠ
-
ಗದಗ: 37.9 ಡಿಗ್ರಿ ಗರಿಷ್ಠ, 23.0 ಡಿಗ್ರಿ ಕನಿಷ್ಠ
-
ಕೊಪ್ಪಳ: 34.6 ಡಿಗ್ರಿ ಗರಿಷ್ಠ, 26.0 ಡಿಗ್ರಿ ಕನಿಷ್ಠ
-
ಹಾವೇರಿ: 32.8 ಡಿಗ್ರಿ ಗರಿಷ್ಠ, 22.8 ಡಿಗ್ರಿ ಕನಿಷ್ಠ
-
ಹೊನ್ನಾವರ: 33.8 ಡಿಗ್ರಿ ಗರಿಷ್ಠ, 25.2 ಡಿಗ್ರಿ ಕನಿಷ್ಠ
-
ಕಾರವಾರ: 36.4 ಡಿಗ್ರಿ ಗರಿಷ್ಠ, 26.1 ಡಿಗ್ರಿ ಕನಿಷ್ಠ
-
ಪಣಂಬೂರು: 34.3 ಡಿಗ್ರಿ ಗರಿಷ್ಠ, 25.2 ಡಿಗ್ರಿ ಕನಿಷ್ಠ
ಮುಂದಿನ ದಿನಗಳಲ್ಲಿ ಭಾರಿ ಮಳೆ ನಿರೀಕ್ಷೆ
ಏಪ್ರಿಲ್ 22ರ ಬಳಿಕ ಕರ್ನಾಟಕದಾದ್ಯಂತ ಮಳೆಯ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಾಳಿ ಮಳೆ, ಗುಡುಗು ಸಹಿತ ಮಳೆ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಇಲಾಖೆ ಸೂಚಿಸಿದೆ.