ಬಸ್‌ ಕಂಡಕ್ಟರ್ ಮೇಲಿನ ಹಲ್ಲೆ ಕೇಸ್: ಪೋಕ್ಸೋ ಪ್ರಕರಣ ದಾಖಲಿಸಿದ್ದ ಬಾಲಕಿಯ ಪೋಷಕರಿಂದ ಸ್ಪಷ್ಟನೆ!

ಬಸ್‌ ಕಂಡಕ್ಟರ್ ಮೇಲೆ ಹಲ್ಲೆ ಕೇಸ್: ಪೋಕ್ಸೋ ಪ್ರಕರಣ ದಾಖಲಿಸಿದ್ದ ಬಾಲಕಿಯ ಪೋಷಕರಿಂದ ಸ್ಪಷ್ಟನೆ!

Belagavi

ಬೆಳಗಾವಿ: ಕೆಎಸ್‌ಆರ್‌ಟಿಸಿ (KSRTC) ಬಸ್ ಕಂಡಕ್ಟರ್ ಕನ್ನಡದಲ್ಲಿ ಮಾತನಾಡಿದ ಕಾರಣಕ್ಕೆ ಮರಾಠಿ ಪುಂಡರಿಂದ ಹಲ್ಲೆಗೆ ಗುರಿಯಾಗಿದ್ದರು. ಪೊಲೀಸರು ಈ ಸಂಬಂಧ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ನಂತರ ಕಂಡಕ್ಟರ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ. ಇದೀಗ ಈ ಪ್ರಕರಣದಲ್ಲಿ ದೊಡ್ಡ ತಿರುವು ಉಂಟಾಗಿದೆ.

ಕಂಡಕ್ಟರ್‌ ವಿರುದ್ಧ ಸುಳ್ಳು ಆರೋಪ?

ಹಲ್ಲೆಗೊಳಗಾದ ಕಂಡಕ್ಟರ್, ತಾನು ಬೇಸರಗೊಂಡಿರುವುದಾಗಿ ಹೇಳಿದ್ದು, ದೂರು ನೀಡಿದ ಬಾಲಕಿ ತನ್ನ ಮಗಳಷ್ಟೇ ಪ್ರಾಯವಿರುವಳು ಎಂದು ಹೇಳಿದರು. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿ, ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದರು.

ADVERTISEMENT
ADVERTISEMENT
ಬಾಲಕಿಯ ಪೋಷಕರಿಂದ ಹೊಸ ವೀಡಿಯೋ ಸ್ಪಷ್ಟನೆ

ಈ ಪ್ರಕರಣದ ಬಗ್ಗೆ ಬಾಲಕಿಯ ಪೋಷಕರು ವೀಡಿಯೋ ಬಿಡುಗಡೆ ಮಾಡಿ, ಅವರ ಮಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಬೆಳಗಾವಿಯಿಂದ ಬಾಳೇಕುಂದ್ರಿಗೆ ಬಸ್ ಪ್ರಯಾಣಿಸುವಾಗ ಟಿಕೆಟ್ ವಿಚಾರವಾಗಿ ಜಗಳವಾಯಿತು. ಕೆಲವರು ಇದನ್ನು ಕನ್ನಡ-ಮರಾಠಿ ಸಂಘರ್ಷವನ್ನಾಗಿ ತಿರಸ್ಕರಿಸಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ನಾವು ಕನ್ನಡ ಅಭಿಮಾನಿಗಳೇ, ಆದರೆ ಜಾತಿ-ಭೇದವಿಲ್ಲ. ಯಾವುದೇ ಒತ್ತಡವಿಲ್ಲದೆ ಸ್ವಇಚ್ಛೆಯಿಂದ ದೂರು ಹಿಂತೆಗೆದುಕೊಳ್ಳುತ್ತಿದ್ದೇವೆ. ದಯವಿಟ್ಟು ಈ ವಿವಾದವನ್ನು ಇಲ್ಲಿಯೇ ನಿಲ್ಲಿಸಿ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Exit mobile version