ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಪಾರ್ಕ್‌ನಲ್ಲಿ ಕೂತು ಮಾತನಾಡುತ್ತಿದ್ದ ಯುವಕ ಮತ್ತು ಯುವತಿಗೆ ಕಿಡಿಗೇಡಿಯೊಬ್ಬ ಅವಾಜ್ ಹಾಕಿ ಗಲಾಟೆ ಮಾಡಿರುವ ಘಟನೆ ನಡೆದಿದೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ.
ಘಟನೆ ಎಲ್ಲಿ, ಹೇಗೆ ನಡೆಯಿತು?
ಬೆಂಗಳೂರು ನಗರದ ಒಂದು ಪಾರ್ಕ್‌ನಲ್ಲಿ ಯುವಕ ಮತ್ತು ಯುವತಿ ಇವರು ಒಬ್ಬರೊಬ್ಬರು ಮಾತನಾಡುತ್ತಾ ಸಮಯ ಕಳೆಯುತ್ತಿದ್ದರು. ಈ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ, ತನ್ನ ಮೊಬೈಲ್ ನಲ್ಲಿ ಮಾತನಾಡುವುದನ್ನು ರೆಕಾರ್ಡ್ ಮಾಡುತ್ತಾ, ಯುವತಿಗೆ “ಬುರ್ಕಾ ತೆಗೆದು ನಿನ್ನ ಹೆಸರೇನು ಹೇಳು” ಎಂದು ಅವಾಜ್ ಹಾಕಿ ಗಲಾಟೆ ಮಾಡಿದ್ದಾನೆ. ಈ ಕಿಡಿಗೇಡಿಯೊಬ್ಬ ಮಾತನಾಡುತ್ತಾ ಕುಳಿತಿದ್ದ ಯುವಕ ಯುವತಿಗೆ “ಕಮಿಟಿಯವರು ಬರ್ತಾರೆ, ಇಲ್ಲಿ ಇರಿ” ಎಂಬಂತೆ ಹೆದರಿಸಿದ. ಯುವತಿ ಗಲಾಟೆ ಮಾಡಬೇಡಿ, ಬಿಟ್ಟು ಬಿಡಿ ಎಂದು ಬೇಡಿಕೊಂಡಿದ್ದರೂ, ಆತ ಮಾತ್ರ ಗಲಾಟೆ ಮಾಡುವುದನ್ನು ನಿಲ್ಲಲಿಲ್ಲ. ನಂತರ ಯುವತಿ ಪೊಲೀಸ್ ಆಯುಕ್ತರಿಗೆ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾಳೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವಾರು ಜನರು ಯುವತಿ ಪರವಾಗಿ ಧ್ವನಿ ಎತ್ತಿದ್ದಾರೆ. ಕೆಲವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ವಿಡಿಯೋ ಟ್ಯಾಗ್ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪೊಲೀಸರಿಂದ ಮಾಹಿತಿ ಸಂಗ್ರಹಿಸಿ ತನಿಖೆ ಪ್ರಾರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಸದ್ದು: ಯುವಕ-ಯುವತಿಗೆ ನಡು ರಸ್ತೆಯಲ್ಲೇ ಹಲ್ಲೆ
ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ಒಂದು ಘನಘೋರ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಕುಳಿತಿದ್ದ ಯುವಕ-ಯುವತಿಯರ ಮೇಲೆ “ನೈತಿಕ ಪೊಲೀಸ್‌ಗಿರಿ” ಹೆಸರಿನಲ್ಲಿ ಹಲ್ಲೆ ನಡೆಸಿದ ಗ್ಯಾಂಗ್‌ನ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿವರ:
ಚಂದ್ರಾಲೇಔಟ್‌ನ ಪಾರ್ಕ್ ಬಳಿ ಬೆಳಗ್ಗೆ ಸ್ಕೂಟರ್‌ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ-ಯುವತಿಯನ್ನು ಗುಂಪೊಂದು ಬಂದು ಕಿರುಕುಳ ನೀಡಿದ್ದಾರೆ. “ನೀವು ಯಾಕೆ ಒಟ್ಟಿಗೆ ಕುಳಿತಿದ್ದೀರಿ? ಇದು ನಮ್ಮ ಏರಿಯಾ” ಎಂದು ಕೇಳಿದ ಗುಂಪೊಂದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಯುವಕ, ಯುವತಿ “ನಾವು ಸ್ನೇಹಿತರು, ಮಾತಾಡುತ್ತಿದ್ದೇವೆ” ಎಂದು ಹೇಳಿದರೂ, ಆ ಗ್ಯಾಂಗ್ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ.
ಯುವತಿಯ ಜಡೆಯನ್ನು ಹಿಡಿದು ಎಳೆದು, ಇಬ್ಬರ ಮೇಲೂ ಹೊಡೆದು ಹಲ್ಲೆ ಮಾಡಿದ್ದಾರೆ. “ನಿಮ್ಮ ಅಪ್ಪ-ಅಮ್ಮಂದಿರಿಗೆ ಫೋನ್ ಮಾಡ್ತೀವಿ” ಎಂದು ಬೆದರಿಸಿದ ಗ್ಯಾಂಗ್, ಹಿಂಸೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹಲ್ಲೆಗೆ ಒಳಗಾದ ಯುವಕ, ಯುವತಿ ಸ್ಥಳೀಯ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಯುವಕ, ಯುವತಿ ದೂರಿನ ಆಧಾರದ ಮೇಲೆ ಪೊಲೀಸರು ಸೈಯದ್, ಶಾಹಿಲ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ದೌರ್ಜನ್ಯ, ಹಲ್ಲೆ ಆರೋಪಗಳನ್ನು ದಾಖಲಿಸಲಾಗಿದೆ.