ಬೆಂಗಳೂರಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟವ ಆರೋಪಿ ಅಂದರ್‌‌

Untitled design 2025 04 13t223818.676

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ದೌರ್ಜನ್ಯ, ಅತ್ಯಾಚಾರದಂತಹ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿವೆ. ಮಹಿಳೆಯರು ರಸ್ತೆಗಳಲ್ಲಿ ಧೈರ್ಯವಾಗಿ ನಡೆದು ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ನಡೆದ ಮತ್ತೊಂದು ಘೋರ ಘಟನೆ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಏಪ್ರಿಲ್ 3ರ ರಾತ್ರಿ 2 ಗಂಟೆ ಸಮಯ, ಬಿಟಿಎಂ ಲೇಔಟ್‌ನ ಸುದ್ದಗುಂಟೆ ಪಾಳ್ಯದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಸ್ನೇಹಿತೆಯ ಜೊತೆಗೆ ನಡೆದುಕೊಂಡು ಬರುತ್ತಿದ್ದ ಯುವತಿಯೊಬ್ಬಳಿಗೆ ಹಿಂಬದಿಯಿಂದ ಬಂದು, ಓರ್ವ ಅಪರಿಚಿತ ಯುವಕ ಲೈಂಗಿಕ ಕಿರುಕುಳ ನೀಡಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ನಂತರ ವೈರಲ್ ಆಯಿತು. ಯುವಕ ತೀವ್ರವಾಗಿ ಅಸಭ್ಯವಾಗಿ ವರ್ತಿಸಿದ್ದ. ಆ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ADVERTISEMENT
ADVERTISEMENT

ಈ ಘಟನೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಕೊಂಡಿತು. ಸಾರ್ವಜನಿಕರು ಪೊಲೀಸರು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಪರಿಣಾಮವಾಗಿ ಎಸ್.ಜಿ. ಪಾಳ್ಯ ಠಾಣೆಯ ಪೊಲೀಸರು ತಕ್ಷಣವೇ ಪ್ರಕರಣದ ತನಿಖೆ ಪ್ರಾರಂಭಿಸಿದರು.

ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಎರಡು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿದರು. ಈ ತಂಡಗಳು ಸೇರಿ ಸುಮಾರು 700ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದವು. ಈ ಮೂಲಕ ಆರೋಪಿ ಯುವಕನ ಚಲನೆಗಳು, ಮುಖಚಹರೆ, ಅವನ ನಡವಳಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಯಿತು. ತನಿಖೆ ಮುಂದುವರಿದಂತೆ, ಆರೋಪಿಯು ಘಟನೆ ನಡೆದು ಹೋದ ನಂತರ ಬೆಂಗಳೂರು ನಗರದಿಂದ ಪರಾರಿಯಾಗಿದ್ದ ಎಂದು ಹೇಳಲಾಗಿತ್ತು.

ಪೊಲೀಸರು ಅವನನ್ನು ಹುಡುಕಲು ರಾಜ್ಯದ ಹೊರಗೆ ತನಿಖೆ ವಿಸ್ತರಿಸಿದರು. ಕೊನೆಗೂ, ಕೇರಳ ರಾಜ್ಯದೊಳಗೆ ಆರೋಪಿಯಿರುವ ಮಾಹಿತಿ ದೊರೆತ ನಂತರ, ವಿಶೇಷ ಕಾರ್ಯಾಚರಣೆ ನಡೆಸಿ ಅವನನ್ನು ಬಂಧಿಸಲಾಯಿತು. ಬಂಧಿತ ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದ್ದು, ಈತನನ್ನು ಈಗ ಬೆಂಗಳೂರಿಗೆ ಕರೆತರಲಾಗಿದೆ.

ಘಟನೆ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿ ಲೋಕೇಶ್ ಗೌಡ ಅವರು ಸಿಸಿಟಿವಿ ದೃಶ್ಯಗಳೊಂದಿಗೆ ಪೊಲೀಸರಿಗೆ ದೂರು ನೀಡಿದ್ದರು. ಈ ವಿಚಾರದಲ್ಲಿ ಅವರ ಸಹಕಾರ ಮತ್ತು ತಕ್ಷಣದ ಕ್ರಮದಿಂದ ಪ್ರಕರಣ ಗಂಭೀರವಾಗಿ ಪರಿಗಣಿಸಲಾಯಿತು.

ಇದೀಗ ಕೊನೆಗೂ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕ್ರಮ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version