ಸದನದಲ್ಲಿ ಪ್ರತಿಧ್ವನಿಸಿದ ರನ್ಯಾ ರಾವ್ ಪ್ರಕರಣ !

Befunky collage 2025 03 10t133342.670

ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ರನ್ಯಾ ರಾವ್ ಗೋಲ್ಡ್‌ ಸ್ಮಗ್ಲಿಂಗ್ ಪ್ರಕರಣವನ್ನು ಚರ್ಚೆಗೆ ತಂದರು. ರನ್ಯಾ ರಾವ್ ದುಬೈಗೆ ಹತ್ತಾರು ಬಾರಿ ಅವರು ದುಬೈಗೆ ಹೋಗಿ ಬರ್ತಾರೆ, ಪೊಲೀಸ್ ರಕ್ಷಣೆಯಲ್ಲಿ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರು ಸಚಿವರು ಈ ವ್ಯವಹಾರದ ಹಿಂದೆ ಇದ್ದಾರೆ ಎಂದು ಸುನೀಲ್ ಕುಮಾರ್ ತಿಳಿಸಿದರು. “ಯಾವ ಸಚಿವರು ಇದರ ಹಿಂದೆ ಇದ್ದಾರೆ ? ಇಂತಹ ಮಾಫಿಯಾ ವ್ಯವಸ್ಥೆಗೆ ಅಂತ್ಯ ಬೇಕು!” ಎಂದು ಹೇಳಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, “ಇದು ಅಂತರರಾಷ್ಟ್ರೀಯ ಮಟ್ಟದ ಪ್ರಕರಣ. ರಾಜ್ಯ ಸರ್ಕಾರಕ್ಕೆ ಮಾಹಿತಿ ಇಲ್ಲ. ಈ ಕೇಸ್‌‌ನ್ನು ಸಿಬಿಐಗೆ ವಿಚಾರಣೆ ನೀಡಿದೆ” ಎಂದರು. ಡಿಐಎಆರ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ, ಡಿಐಎಆರ್ ನವರು ಇದನ್ನ ಹಿಡಿದಿರೋದು ಅವರ ತಂದೆ ಡಿಜಿಪಿ ಇದ್ದಾರೆ. ಅವರ ತಂದೆ ರಕ್ಷಣೆ ಕೊಟ್ಟಿರಬಹುದೆಂಬ ಆರೋಪವಿದೆ. ಇಬ್ಬರು ಸಚಿವರು ಇದ್ದಾರೆ ಅಂತಿದಿರಾ. ಆದರೆ ಅದನ್ನು ಸಿಬಿಐನವರೇ ಕಂಡು ಹಿಡಿಯಬೇಕು ಸಚಿವ ಜಿ. ಪರಮೇಶ್ವರ್ ತಿಳಿಸಿದರು.

ADVERTISEMENT
ADVERTISEMENT

ಹಿರಿಯ ಪೊಲೀಸ್ ಅಧಿಕಾರಿ ಈ ಪ್ರಕರಣದಲ್ಲಿ ಇನ್ವಾಲ್ವ್ ಆಗಿದ್ದಾರೆ.  ಅವರು ಪೊಲೀಸರ ರಕ್ಷಣೆ ಹೇಗೆ ಕೊಟ್ರು, ಇದರ ಬಗ್ಗೆ ತನಿಖೆ ಆಗಬೇಕಲ್ವಾ? ಸಿಬಿಐಗೆ ಕೊಟ್ಟಿರೋದು ಗೊತ್ತಿಲ್ಲ ಅಂದ್ರೆ ಹೇಗೆ? ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ನಂತರ ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರವರು, ತನಿಖೆ ನಡೆಯುತ್ತಿದೆ ಹೆಚ್ಚಿನ ಮಾಹಿತಿ ಇಲ್ಲ. ಡಿಐಎಆರ್ ನವರು ಅದನ್ನ ನೋಡ್ತಿದ್ದಾರೆ. ಅದರ ಬಗ್ಗೆ ನಾವು ಹೇಳೋಕೆ ಆಗಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿದ್ದಾರೆ.

ನಮ್ಮ ವ್ಯಾಪ್ತಿಯಲ್ಲಿ ಏನಾಗಿದೆ ಅದನ್ನ ತನಿಖೆ ಮಾಡ್ತೇವೆ ,ಪ್ರೋಟೋಕಾಲ್ ಕೊಟ್ಟ ಬಗ್ಗೆ ತನಿಖೆ ಮಾಡ್ತೇವೆ ಎಂದ  ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

Exit mobile version