ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು ಮಾಡಿತ್ತು. ಹಾಗೆಯೇ ವೆಬ್ ಸೈಟ್ ಮೂಲಕವೂ ಓದುಗರನ್ನು ಗ್ಯಾರಂಟಿ ನ್ಯೂಸ್ ತಲುಪಿತ್ತು. ಇದೀಗ ಸ್ಯಾಟಲೈಟ್ ವಾಹಿನಿ ಮೂಲಕ ಕರ್ನಾಟಕದಾದ್ಯಂತ ಲಭ್ಯವಿದೆ.
ಗ್ಯಾರಂಟಿ ನ್ಯೂಸ್ ರೂಂ ಉದ್ಘಾಟನೆಯನ್ನ ಪೊಲೀಸ್ ಕಮಿಷನರ್ ಆದ ಬಿ. ದಯಾನಂದ್ ಅವರು ಟೇಪ್ ಕತ್ತಿರಿಸುವ ಮೂಲಕ ನೆರವೇರಿಸಿದರು. ಗ್ಯಾರಂಟಿ ನ್ಯೂಸ್ ಕಚೇರಿಯನ್ನ ಸಂಪೂರ್ಣವಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಯುವ ಪತ್ರಕರ್ತರಿಗೆ ಉತ್ತೇಜನದ ಮಾತುಗಳನ್ನಾಡಿ ಪ್ರೋತ್ಸಾಹಿಸಿದರು.
ಗ್ಯಾರಂಟಿ ನ್ಯೂಸ್‌ನ ಮುಖ್ಯಸ್ಥರಾದ ಟಿಎಂ ಶಿವಸ್ವಾಮಿ, ಪ್ರಧಾನ ಸಂಪಾದಕರಾದ ರಾಧಾ ಹಿರೇಗೌಡರ್ ಅವರಿಗೆ ಶುಭಕೋರಿದರು. ಇದೇ ವೇಳೆ ಹಿರಿಯ ಸಂಪಾದಕರಾದ ಅರವಿಂದ ಸಾಗರ್, ಸಂಪಾದಕರಾದ ಸತೀಶ್ ಆಂಜನಪ್ಪ ಸೇರಿದಂತೆ ಗ್ಯಾರಂಟಿ ನ್ಯೂಸ್‌ನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.