ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಚಾನಲ್ ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಚಾನಲ್ ಲೋಕಾರ್ಪಣೆ

Dk shivakumar

ಗ್ಯಾರಂಟಿ ನ್ಯೂಸ್.. ಇದು ನಮ್ಮೆಲ್ಲರ ಕನಸು.. ಫೆಬ್ರವರಿ 14, ಶುಕ್ರವಾರ ಈ ಕನಸು ನನಸಾಗಿದೆ.. ಸ್ಯಾಟಲೈಟ್ ಸುದ್ದಿವಾಹಿನಿಯಾಗಿ ಗ್ಯಾರಂಟಿ ನ್ಯೂಸ್, ವೀಕ್ಷಕರ ಮುಂದೆ ಬಂದಿದೆ.. ಕಳೆದ ಒಂದು ವರ್ಷದಿಂದ, ಈ ಅತ್ಯಾದ್ಭುತ ಕ್ಷಣಕ್ಕಾಗಿ ಕಾಯ್ತಿದ್ದ ಇಡೀ ತಂಡದ ಶ್ರಮಕ್ಕೆ ಈಗ ಸಾರ್ಥಕತೆ ಸಿಕ್ಕಿದೆ.. ತಂಡದ ಶ್ರಮ, ಮಾಡಿದ ತ್ಯಾಗ ವರ್ಣಿಸಲು ಅಸಾಧ್ಯ. ಪ್ರತಿ ಘಟನೆಯ ಹಿಂದೆ ಕೇವಲ ಅನುಭವ ಇರುತ್ತೆ.. ಆದ್ರೆ ಅಪರೂಪಕ್ಕೊಮ್ಮೆ ಆಗೋದೇ ಅದ್ಭುತ.. ಆ ಅದ್ಭುತವೇ ಗ್ಯಾರಂಟಿ ನ್ಯೂಸ್..

ADVERTISEMENT
ADVERTISEMENT

ಕನ್ನಡಿಗರ ಮನೆ ಮನೆಯಲ್ಲೂ ಮನೆಮಾತಾಗಲು ನಿಮ್ಮ ಮುಂದೆ ಈಗ ಗ್ಯಾರಂಟಿ ನ್ಯೂಸ್ ಚಾನೆಲ್ ಬರ್ತಿದ್ದು, ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಚಾನಲ್ ಅನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೋಕಾರ್ಪಣೆ ಮಾಡಿದ್ದಾರೆ.  ನಂತರ ಮಾತಾಡಿದ ಅವರು ಗ್ಯಾರಂಟಿ ನ್ಯೂಸ್ ಚಾನೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು. ಬಳಿಕ ಕಚೇರಿಯ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿ ವೀಕ್ಷಿಸಿದರು.

ಗ್ಯಾರಂಟಿ ನ್ಯೂಸ್ ಎಂಡಿ ಟಿಎಂ ಶಿವಸ್ವಾಮಿ, ಪ್ರಧಾನ ಸಂಪಾದಕರಾದ ರಾಧಾ ಹಿರೇಗೌಡರ್, ಹಿರಿಯ ಸಂಪಾದಕರಾದ ಅರವಿಂದ ಸಾಗರ್, ಸಂಪಾದಕರಾದ ಸತೀಶ್ ಆಂಜನಪ್ಪ ಉಪಸ್ಥಿತರಿದ್ದರು.

 

Exit mobile version