ಹೆಚ್‌ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ : ಬಿಡದಿ ತೋಟಕ್ಕೆ ನುಗ್ಗಿದ ಜೆಸಿಬಿ

Untitled design (64)

ರಾಮನಗರ: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಒಡೆತನದ, ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಭೂ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಇಂದು ಜೆಸಿಬಿ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸ್ ಭದ್ರತೆಯಲ್ಲಿ ಕಂದಾಯ ಇಲಾಖೆ ಈ ತೆರವು ಕಾರ್ಯಾಚರಣೆಯನ್ನು ಕೈಗೊಂಡಿದೆ. 

ಭೂ ಒತ್ತುವರಿ 

ADVERTISEMENT
ADVERTISEMENT

ಕಂದಾಯ ಇಲಾಖೆಯ ಪ್ರಕಾರ, ಈ ತೋಟದ ಮನೆಯಲ್ಲಿ ಒಟ್ಟು 14 ಎಕರೆಗೂ ಅಧಿಕ ಭೂಮಿ ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಕೋರ್ಟ್ ಆದೇಶದಂತೆ ಸರ್ವೇ ನಡೆಸಿ, ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಡಿಸಿ ಯಶವಂತ್ ವಿ. ಗುರುಕರ್ ನೇತೃತ್ವದಲ್ಲಿ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಯಿಸಿದ್ದು, ಒತ್ತುವರಿ ಮಾಡಲಾದ ಭೂಮಿಯ ಪಟ್ಟಿ ಸಿದ್ಧವಾಗಿದ್ದು, ಸೂಕ್ತ ಪರಿಶೀಲನೆ ಬಳಿಕ ಕೋರ್ಟ್‌‌ಗೆ ವರದಿ ಕೊಡುತ್ತೇವೆ ಎಂದರು.

ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಮಾತನಾಡಿದ್ದು, “ನಾವು ಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈಗಾಗಲೇ 10ಕ್ಕೂ ಹೆಚ್ಚು ಸರ್ವೇ ನಂಬರ್‌ಗಳ ಪರಿಶೀಲನೆ ಮುಗಿದಿದೆ. ಒತ್ತುವರಿ ತೆರವು ಮಾಡಿದ ಬಳಿಕ ಈ ಬಗ್ಗೆ ಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು.” ಎಂದರು.

ಜೆಸಿಬಿ ಎಂಟ್ರಿ ಮತ್ತು ಕಾರ್ಯಾಚರಣೆ

ಇಂದು ಬೆಳಗ್ಗೆಯಿಂದಲೇ ಕೇತಗಾನಹಳ್ಳಿ ತೋಟದ ಮನೆಗೆ 4 ಜೆಸಿಬಿಗಳು ಪ್ರವೇಶಿಸಿ, ಭೂಮಿ ಸಮತಟ್ಟು ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೇ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಒತ್ತುವರಿ ಜಾಗದ ಮೌಲ್ಯವನ್ನು ನಿರ್ಧರಿಸಿ, ಸರಕಾರದ ಹೆಸರಿನಲ್ಲಿ ಕಲ್ಲಿನ ಕಂಬಗಳನ್ನು ನೆಟ್ಟು, ಸರಕಾರಿ ಬೋರ್ಡ್ ಅಳವಡಿಸಲು ತೀರ್ಮಾನಿಸಲಾಗಿದೆ.

ಒತ್ತುವರಿ ತೆರವು ಪ್ರಕ್ರಿಯೆ

ಒತ್ತುವರಿ ಜಾಗದಲ್ಲಿ ಕುಮಾರಸ್ವಾಮಿ ಅವರು ತೆಂಗು, ಅಡಿಕೆ ಮತ್ತು ಇತರ ಬೆಳೆಗಳನ್ನು ಬೆಳೆಸಿದ್ದರು. ಇದೀಗ ಈ ಪ್ರದೇಶವನ್ನು ತೆರವುಗೊಳಿಸಲು ಸರಕಾರ ನಿರ್ಧಾರ ಮಾಡಿದೆ. ಅಕ್ರಮ ಭೂ ಒತ್ತುವರಿ ತೆರವುಗೊಳಿಸಿದ ಬಳಿಕ ಈ ಜಾಗಕ್ಕೆ ಸರಕಾರಿ ಜಮೀನು ಎಂದು ಘೋಷಿಸಲಾಗುವುದು.

ಪೊಲೀಸ್ ಭದ್ರತೆ ಮತ್ತು ಮುಂದಿನ ಕ್ರಮ

ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಭದ್ರತೆ ಒದಗಿಸಲಾಗಿದೆ. ಅಧಿಕಾರಿಗಳು ಈ ಪ್ರಕರಣವನ್ನು ನೇರವಾಗಿ ಹೈಕೋರ್ಟ್ ಗಮನಕ್ಕೆ ತಂದು, ಮುಂದಿನ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.

Exit mobile version