ಗ್ಯಾರಂಟಿ ನ್ಯೂಸ್ ಗೆ ಶುಭ ಹಾರೈಸಿದ ಸ್ಯಾಂಡಲ್‌ವುಡ್‌‌ನ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ

ಗ್ಯಾರಂಟಿ ನ್ಯೂಸ್ ಕಚೇರಿಯಲ್ಲಿ ನಟ ಧ್ರುವ ಸರ್ಜಾ

Untitled design (86)

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು ಮಾಡಿತ್ತು. ಹಾಗೆಯೇ ವೆಬ್ ಸೈಟ್ ಮೂಲಕವೂ ಓದುಗರನ್ನು ಗ್ಯಾರಂಟಿ ನ್ಯೂಸ್ ತಲುಪಿತ್ತು. ಇದೀಗ ಸ್ಯಾಟಲೈಟ್ ವಾಹಿನಿ ಮೂಲಕ ಕರ್ನಾಟಕದಾದ್ಯಂತ ಲಭ್ಯವಿದೆ.

ADVERTISEMENT
ADVERTISEMENT

ಕನ್ನಡಿಗರ ಮನೆ ಮನೆಯಲ್ಲೂ ಮನೆಮಾತಾಗಲು ನಿಮ್ಮ ಮುಂದೆ ಈಗ ಗ್ಯಾರಂಟಿ ನ್ಯೂಸ್ ಚಾನೆಲ್ ಬರ್ತಿದ್ದು, ಇದರ ನೂತನ ಕಟ್ಟಡದ ಉದ್ಘಾಟನೆ ಸಮಾರಂಭಕ್ಕೆ ಸ್ಯಾಂಡಲ್‌ವುಡ್‌ನ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹಾಗೂ ಡೈಲಾಗ್ ರೈಟರ್ ಕ್ರಾಂತಿ ಕುಮಾರ್ ಆಗಮಿಸಿದ್ರು. ನಂತರ ಗ್ಯಾರಂಟಿ ನ್ಯೂಸ್ ಕಚೇರಿಗೆ ಕಚೇರಿಯ ಎಲ್ಲಾ ವಿಭಾಗಗಳನ್ನು ವಿಕ್ಷಿಸಿದ್ರು.

ಬಳಿಕ ಗ್ಯಾರಂಟಿ ನ್ಯೂಸ್ನ ಸಿಬ್ಬಂದಿಗಳ ಜೊತೆ ನಟ ಧ್ರುವ ಸರ್ಜಾ, ಕ್ರಾಂತಿ ಕುಮಾರ್ ಕೆಲ ಕಾಲ ಕೂತು ಮಾತಾಡಿ ಗ್ಯಾರಂಟಿ ನ್ಯೂಸ್ ಚಾನೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.. ಅಷ್ಟೇ ಅಲ್ಲದೆ ಗ್ಯಾರಂಟಿ ಸಿಬ್ಬಂದಿಯ ಸಾದಾ ಸೀದಾ ಪ್ರಶ್ನೆಗಳಿಗೆ ಧ್ರುವ ಸರ್ಜಾ ಕೂಡಾ ಅಷ್ಟೇ ಸರಳವಾಗಿ ಉತ್ತರಿಸಿದ್ರು.

ಈ ವೇಳೆ ಗ್ಯಾರಂಟಿ ಗ್ಯಾರಂಟಿ ನ್ಯೂಸ್ ಎಂಡಿ ಟಿಎಂ ಶಿವಸ್ವಾಮಿ, ಪ್ರಧಾನ ಸಂಪಾದಕರಾದ ರಾಧಾ ಹಿರೇಗೌಡರ್, ಹಿರಿಯ ಸಂಪಾದಕರಾದ ಅರವಿಂದ ಸಾಗರ್, ಸಂಪಾದಕರಾದ ಸತೀಶ್ ಆಂಜನಪ್ಪ ಸೇರಿದಂತೆ ಗ್ಯಾರಂಟಿ ನ್ಯೂಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version