ರಾಜ್ಯಾದ್ಯಂತ ಬೆಳಗಾವಿ ಪ್ರಕರಣದ ಕಿಚ್ಚು ವ್ಯಾಪಾಕವಾಗಿ ಹಬ್ಬುತ್ತಿದ್ದು, ಮಾರ್ಚ್ 22ಕ್ಕೆ ಬಂದ್‌ಗೆ ಸಿದ್ದತೆಗಳು ನಡೆಯುತಿದೆ. ಈಗಾಗಲೇ ನೂರಾರು ಸಂಘಟನೆಗಳು ಬಂದ್‌ಗೆ ಕೈ ಜೋಡಿಸಿದ್ದು ಸಂಪೂರ್ಣ ರಾಜ್ಯವೇ ಸ್ಥಬ್ದವಾಗುವ ಸಾದ್ಯತೆ ಹೆಚ್ಚಿದೆ.
ಬೆಳಗಾವಿಯಲ್ಲಿ ಕಂಡೆಕ್ಟರ್ ಮೇಲೆ ಹಲ್ಲೆ ಖಂಡಿಸಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ಈಗಾಗಲೇ ಕರ್ನಾಟಕ ಸಂಪೂರ್ಣ ಬಂದ್‌ಗೆ ದಿನ ನಿಗದಿ ಮಾಡಿದ್ದು. ಮಾರ್ಚ್ 22 ರಂದು ಕರ್ನಾಟಕ ಸಂಪೂರ್ಣವಾಗಿ ಬಂದ್ ಮಾಡಲು ಸಿದ್ದತೆ ನಡೆಯುತಿದೆ. ಸಾವಿರಾರು ಸಂಘಟನೆಗಳು ಕೈ ಜೋಡಿಸಿವೆ. ಇದರಿಂದಾಗಿ ವಿಕೇಂಡ್ ಟ್ರಿಪ್ ಪ್ಲಾನ್ ಮಾಡಿದರವರಿಗೆ ಶಾಕ್ ಎದುರಾಗಿದೆ.
ಹಾಗಿದ್ರೆ ಮಾರ್ಚ್ 22 ರಂದು ಎನೀರುತ್ತೆ ಏನಿರಲ್ಲಾ ಅನ್ನೊದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಶನಿವಾರ ಬಂದ್ ವೇಳೆ ಏನಿರಲ್ಲಾ…!?
- ಆಟೋ ಸಿಗಲ್ಲಾ
- ಖಾಸಗಿ ಬಸ್‌ಗಳು ಸಿಗೋದಿಲ್ಲಾ
- ಮಾಲ್ ಥೇಟರ್ ಇರೋದಿಲ್ಲಾ
- ಸ್ಕೂಲ್ ಕಾಲೇಜ್ ಬಸ್ ಇರೋದಿಲ್ಲಾ
- ಮದ್ಯದ ಅಂಗಡಿಗಳು ಕೂಡ ಬಂದ್
- ಹೋಟೆಲ್ಗಳು ಬಂದ್
- ಗೂಡ್ಸ್ ವಾಹನಗಳು ಇರೋದಿಲ್ಲಾ
- ಗಾರ್ಮೆಂಟ್ಸ್ ಓಪನ್ ಇರೋದಿಲ್ಲಾ
ಕರ್ನಾಟಕ ಬಂದ್ ವೇಳೆ ಏನೂ ಇರುತ್ತೆ!
- ಆಸ್ಪತ್ರೆ
- ಮೆಡಿಕಲ್
- ಆ್ಯಂಬುಲೆನ್ಸ್
- ತುರ್ತು ಸೇವೆಗಳು
ಬಂದ್‌ಗೆ ಯಾರ ಬೆಂಬಲ ಸಿಕ್ಕಿದೆ?
- ಓಲಾ, ಊಬರ್ ಟ್ಯಾಕ್ಸಿ ಅಸೋಸಿಯೇಷನ್
- ಎರಡು ಆಟೋ ಅಸೋಸಿಯೇಷನ್
- ಎಪಿಎಂಸಿ ಸಂಘಟನೆ
ಇನ್ನೂ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿ ಬಸ್ ಗಳ ಬಂದ್ ಬಗ್ಗೆ ತಿರ್ಮಾನ ಆಗಲಿದೆ. ಸದ್ಯ ನೌಕರರು ಬಂದ್‌ಗೆ ಬೆಂಬಲ ಸೂಚಿಸಿದ್ದು ಬಸ್‌ಗಳು ನಿಲ್ಲುತ್ತಾ ಅನ್ನೋ ಪ್ರಶ್ನೆ ಆರಂಭವಾಗಿದೆ. ಸದ್ಯ ಸಾರಿಗೆ ಸಚಿವರ ಜೊತೆ ಕನ್ನಡಪರ ಸಂಘಟನೆಗಳು ಚರ್ಚೆ ಮಾಡುತ್ತಿವೆ.
ಓಟ್ನಲಿ ಕರ್ನಾಟಕ ಬಂದ್ ಬಸಿ ಕಾವೇರಿದ್ದು ವೀಕೆಂಡ್ ಟ್ರಿಪ್ ಪ್ಲಾನ್ ಮಾಡಿದವರಿಗೆ ಶಾಕ್ ನೀಡೋದಂತು ಸತ್ಯ.