ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) 2025 ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ (Second PU Exam) ಫಲಿತಾಂಶ ನಾಳೆ ( ಏಪ್ರಿಲ್ 8) ಪ್ರಕಟವಾಗಲಿದೆ.
ಏಪ್ರಿಲ್ 8 ಮಂಗಳವಾರ ಮಧ್ಯಾಹ್ನ 12:30 ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು 1:30ಕ್ಕೆ ವೆಬ್‌ಸೈಟ್ ಮೂಲಕ ಫಲಿತಾಂಶ ವೀಕ್ಷಿಸಬಹುದು. ಮಾರ್ಚ್ 1ರಿಂದ 20ರವರೆಗೆ ನಡೆದ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ವಿದ್ಯಾರ್ಥಿಗಳು ಫಲಿತಾಂಶ ವಿಕ್ಷೀಸುವುದು ಹೇಗೆ?
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ. ಮೈನ್ ಪೇಜ್‌ನಲ್ಲಿ 2nd PUC Result 2025 ಎಂಬಲ್ಲಿ ಕ್ಲಿಕ್ ಮಾಡಿ ಲಿಂಕ್ ಓಪನ್ ಮಾಡಿ. ನಂತರ ಲಾಗಿನ್ ವಿವರಗಳನ್ನು ನಮೂದಿಸಿ (ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್). ನಂತರ ಸಬ್ ಮಿಟ್ ಕೊಟ್ಟು ಫಲಿತಾಂಶ ಪರಿಶೀಲಿಸಿ.ಕರ್ನಾಟಕ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ರೋಲ್ ನಂಬರ್, ಒಟ್ಟು ಅಂಕಗಳು, ವಿಷಯವಾರು ಅಂಕಗಳು ಹಾಗೂ ಫಲಿತಾಂಶ ಇರುತ್ತದೆ.