ಬೆಂಗಳೂರು: ಕಳೆದ ಮೂರು ತಿಂಗಳ ಕೂಲಿಂಗ್ ನಂತರ ರಾಜ್ಯದಲ್ಲಿ ಹವಾ ತೀವ್ರವಾಗಿ ಬಿಸಿಯಾಗುತ್ತಿದೆ. ಮುಂದಿನ ನಾಲ್ಕು ದಿನ ಕರ್ನಾಟಕದ ಹಲವು ಭಾಗಗಳಲ್ಲಿ ತಾಪಮಾನ ಗರಿಷ್ಠ ಮಟ್ಟ ತಲುಪಲಿದ್ದು, ಜನರು ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ. ರಾಜ್ಯ ಆರೋಗ್ಯ ಇಲಾಖೆ ಈ ಕುರಿತಂತೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ತಾಪಮಾನ ಹೆಚ್ಚಳ
ಮಾರ್ಚ್ ತಿಂಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ. ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಕಾರವಾರ ಹಾಗೂ ಕರಾವಳಿ ಭಾಗದಲ್ಲಿ 40-42 ಡಿಗ್ರಿ ಸೆಲ್ಸಿಯಸ್ ತಲುಪುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿಯೂ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ.
ಆರೋಗ್ಯ ಇಲಾಖೆಯ ಎಚ್ಚರಿಕೆ
ಬಿಸಿಲಿನ ತೀವ್ರತೆಯಿಂದ ತೊಂದರೆ ತಪ್ಪಿಸಲು ಆರೋಗ್ಯ ಇಲಾಖೆ ನೀಡಿದ ಮಾರ್ಗಸೂಚಿಗಳು ಈಂತಿವೆ:
- ನಿಯಮಿತವಾಗಿ ನೀರು ಸೇವಿಸಿ, ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುವುದು ಉತ್ತಮ.
- ನಿಂಬೆಹಣ್ಣು ಶರಬತ್ತು, ಮಜ್ಜಿಗೆ, ಲಸ್ಸಿ ಮತ್ತು ಹಣ್ಣಿನ ಜ್ಯೂಸ್ ಸೇವನೆ ಮಾಡಿ.
- ಹಣ್ಣಿನ ರಸ ಮತ್ತು ನೀರಿನ ಅಂಶ ಅಧಿಕವಿರುವ ತರಕಾರಿಗಳನ್ನು ಸೇವಿಸಿ.
- ಹತ್ತಿಯ ಬಟ್ಟೆ, ಹಗುರ ಬಣ್ಣದ ಬಟ್ಟೆ ಧರಿಸುವುದು ಒಳಿತು.
- ಬಿಸಿಲಿನಿಂದ ರಕ್ಷಣೆಗಾಗಿ ಛತ್ರಿ, ಟೋಪಿ ಅಥವಾ ಹ್ಯಾಟ್ ಧರಿಸಿ.
- ಬಿಸಿಲಿನಲ್ಲಿ ನಡೆಹೊಗುವಾಗ ಚಪ್ಪಲಿ ಅಥವಾ ಶೂಸ್ ಧರಿಸಿ.
- ಒಳಾಂಗಣದಲ್ಲಿ ಗಾಳಿ ಬೀಸುವ ಸ್ಥಳದಲ್ಲಿ ವಿರಾಮ ತೆಗೆದುಕೊಳ್ಳಿ.
- ಬಹುಷಃ ಬೆಳಿಗ್ಗೆ ಅಥವಾ ಸಂಜೆ ಚಟುವಟಿಕೆಗಳನ್ನು ನಿರ್ವಹಿಸಿ.
ಪ್ರಮುಖ ನಗರಗಳ ತಾಪಮಾನ ವಿವರ
- ಕಾರವಾರ – ಗರಿಷ್ಠ: 38.2°C, ಕನಿಷ್ಠ: 23.5°C
- ಬೆಳಗಾವಿ – ಗರಿಷ್ಠ: 35.0°C, ಕನಿಷ್ಠ: 17.4°C
- ಬೀದರ್ – ಗರಿಷ್ಠ: 35.0°C, ಕನಿಷ್ಠ: 17.4°C
- ವಿಜಯಪುರ – ಗರಿಷ್ಠ: 36.0°C, ಕನಿಷ್ಠ: 18.5°C
- ಕಲಬುರಗಿ – ಗರಿಷ್ಠ: 38.0°C, ಕನಿಷ್ಠ: 22.2°C
- ರಾಯಚೂರು – ಗರಿಷ್ಠ: 35.4°C, ಕನಿಷ್ಠ: 19.0°C
- ಬೆಂಗಳೂರು – ಗರಿಷ್ಠ: 36.0°C (ಅಂದಾಜು)
ನಿಗಾ ವಹಿಸಿ, ಸುರಕ್ಷಿತವಾಗಿ ಇರಿ!
ಹಿಂದಿನ ವರ್ಷಗಳಿಗಿಂತಲೂ ಈ ಬಾರಿಯ ಬೇಸಿಗೆ ಹೆಚ್ಚು ತೀವ್ರವಾಗಲಿದೆ ಎಂಬ ಮುನ್ಸೂಚನೆ ಇದೆ. ಆದ್ದರಿಂದ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳಿ. ಬಿಸಿಲಿನ ಹೊಡೆತ ತಪ್ಪಿಸಲು ಸರಿಯಾದ ಆಹಾರ ಮತ್ತು ನೀರುಸೇವನೆ ಮಾಡುವುದು ಅತ್ಯವಶ್ಯಕ.