ಬೆಂಗಳೂರಿನ ಜೊತೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಬಿಸಿಲಿನ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಾಗಲಕೋಟೆ, ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಭಾರೀ ಏರಿಕೆಯಾಗುವ ನಿರೀಕ್ಷೆಯಿದ್ದು, ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿನ ಗರಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಿದೆ. ರಾಯಚೂರು ಮತ್ತು ಯಾದಗಿರಿಯಂತ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 38 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ, ಆದ್ದರಿಂದ ಜನರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಲು ಸೂಚಿಸಲಾಗಿದೆ.
ನಗರಗಳ ಹವಾಮಾನ ವರದಿ:
- ಬೆಂಗಳೂರು: ಗರಿಷ್ಠ – 32°C, ಕನಿಷ್ಠ – 22°C
- ಮಂಗಳೂರು: ಗರಿಷ್ಠ – 32°C, ಕನಿಷ್ಠ – 26°C
- ಶಿವಮೊಗ್ಗ: ಗರಿಷ್ಠ – 36°C, ಕನಿಷ್ಠ – 21°C
- ಬೆಳಗಾವಿ: ಗರಿಷ್ಠ – 34°C, ಕನಿಷ್ಠ – 21°C
- ಮೈಸೂರು: ಗರಿಷ್ಠ – 34°C, ಕನಿಷ್ಠ – 22°C
ಮಂಡ್ಯ, ಮಡಿಕೇರಿ, ರಾಮನಗರ, ಹಾಸನ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಇವುಗಳಲ್ಲಿ ಮಧ್ಯಾಹ್ನದ ವೇಳೆ ಬಿಸಿಗಾಳಿ ಬೀಸುವ ಸಾಧ್ಯತೆ ಇದ್ದು, ರೈತರು ಮತ್ತು ಅಂಗಡಿ ವ್ಯಾಪಾರಿಗಳು ತಾವು ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.
ಉತ್ತರ ಕರ್ನಾಟಕದ ಪ್ರಮುಖ ನಗರಗಳು:
- ರಾಯಚೂರು: ಗರಿಷ್ಠ – 38°C, ಕನಿಷ್ಠ – 26°C
- ಯಾದಗಿರಿ: ಗರಿಷ್ಠ – 36°C, ಕನಿಷ್ಠ – 25°C
- ಬೀದರ್: ಗರಿಷ್ಠ – 35°C, ಕನಿಷ್ಠ – 23°C
- ಕಲಬುರ್ಗಿ: ಗರಿಷ್ಠ – 37°C, ಕನಿಷ್ಠ – 25°C
- ಬಾಗಲಕೋಟೆ: ಗರಿಷ್ಠ – 37°C, ಕನಿಷ್ಠ – 24°C
ಈ ಪ್ರದೇಶಗಳಲ್ಲಿ ಭಾರೀ ತಾಪಮಾನ ಇರುವುದು ಜನರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಬಿಸಿಗಾಳಿಯಿಂದ ರಕ್ಷಣೆ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ, ಮಧ್ಯಾಹ್ನದ ಸಮಯದಲ್ಲಿ ಹೆಚ್ಚು ಹೊರಗಿನ ಚಟುವಟಿಕೆಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
ಕೃಷಿ ಮತ್ತು ಜನಜೀವನದ ಮೇಲೆ ಪರಿಣಾಮ
ಬಿಸಿಲಿನ ತೀವ್ರತೆ ಮತ್ತು ಒಣಹವೆಯಿಂದ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ನೀರಿನ ಕೊರತೆ ಮತ್ತು ಬೆಳೆಗಳ ಮೇಲಿನ ತಾಪಮಾನ ಪರಿಣಾಮದಿಂದ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ರೈತರಿಗೆ ಬೆಳೆಗಳ ನಿರ್ವಹಣೆ ಮತ್ತು ನೀರಿನ ಸರಿಯಾದ ಬಳಕೆ ಕುರಿತು ಸೂಕ್ತ ಮಾರ್ಗದರ್ಶನ ನೀಡಿದೆ.
ಅನಿವಾರ್ಯವಾಗಿ ಹೊರಗೆ ಹೋಗಬೇಕಾದರೆ ತಲೆ, ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳಿ. ಬಿಸಿಗಾಳಿಯಿಂದ ರಕ್ಷಣೆ ಪಡೆಯಲು ಮಾಸ್ಕ್ ಮತ್ತು ಶೀತಲವಾದ ಉಡುಪು ಧರಿಸಿ. ತಂಪಾದ ಆಹಾರ ಪದ್ಧತಿಯನದನು ಅನುಸರಿಸಿ ಸೇವಿಸಿ. ಹವಾಮಾನ ಇಲಾಖೆಯ ಸೂಚನೆಗಳನ್ನು ಆಲಿಸಿ, ಆರೋಗ್ಯದ ಕಡೆ ಗಮನ ಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ.