ಸಾಲು ಸಾಲು ಬೆಲೆ ಏರಿಕೆಗೆ ತುತ್ತಾಗಿರುವ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸರ್ಕಾರಿ ಬಸ್ನಂತೆ ಖಾಸಗಿ ಬಸ್ ದರ ಶೇಕಡಾ 15ರಷ್ಟು ಏರಿಕೆ ಮಾಡಲು ಖಾಸಗಿ ಬಸ್ ಮಾಲಿಕರ ಸಂಘ ತೀರ್ಮಾನಿಸಿದೆ.
ರಾಜ್ಯದಲ್ಲಿ ಶೇ.15ರಷ್ಟು ಟಿಕೆಟ್ ದರ ಏರಿಕೆ ಮಾಡಲು ಖಾಸಗಿ ಬಸ್ ಮಾಲೀಕರು ನಿರ್ಧಾರ ಮಾಡಿದ್ದಾರೆ. ಇದೇ ಏಪ್ರಿಲ್ 15ರ ನಂತರ ಪರಿಷ್ಕೃತ ದರ ಜಾರಿಗೆ ಬರುತ್ತಿದ್ದು, ಖಾಸಗಿ ಬಸ್ ಟಿಕೆಟ್ ದರ ಕೂಡ ದುಬಾರಿ ಆಗುತ್ತಿದೆ.
ಖಾಸಗಿ ದರ ಏರಿಕೆಗೆ ಕಾರಣವೇನು?
ಇತ್ತೀಚೆಗೆ ರಾಜ್ಯ ಸರ್ಕಾರ ಡಿಸೇಲ್ ದರ ಪ್ರತಿ ಲೀಟರ್ಗೆ 2 ರೂಪಾಯಿ ಏರಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಲಾರಿ ಮಾಲೀಕರ ಸಂಘ ಡಿಸೇಲ್ ದರ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಏಪ್ರಿಲ್ 15ರವರೆಗೂ ಗಡುವು ನೀಡಿತ್ತು. ಲಾರಿ ಮಾಲೀಕರ ಅಸೋಸಿಯೇಷನ್ ಈಗಾಗಲೇ ಮುಷ್ಕರಕ್ಕೆ ಕರೆ ಕೊಟ್ಟಿದೆ. ಏಪ್ರಿಲ್ 15ರ ಒಳಗೆ ಸರ್ಕಾರ ಡೀಸೆಲ್ ದರ ಕಡಿಮೆ ಮಾಡದಿದ್ರೆ ಖಾಸಗಿ ಬಸ್ ದರ ಏರಿಕೆ ಮಾಡುವುದಾಗಿ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ಎಸ್. ನಟರಾಜ್ ಹೇಳಿಕೆ ನೀಡಿದ್ದಾರೆ.
ಡೀಸೆಲ್ ದರವನ್ನು ರಾಜ್ಯ, ಕೇಂದ್ರ ಸರ್ಕಾರ ತಲಾ 2 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಟೈರ್, ಬಸ್ ಬಿಡಿ ಭಾಗ, ಟೋಲ್ ದರ ಕೂಡ ಹೆಚ್ಚಳ ಆಗಿದೆ. ಈ ಕಾರಣಕ್ಕೆ ನಾವು ಬಸ್ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಆಗಿದೆ ನಟರಾಜ್ ಹೇಳಿದರು.
ಲಾರಿ ಮಾಲೀಕರ ಸಂಘದ ಬಂದ್ಗೆ ನಮ್ಮ ಬೆಂಬಲ ಇದೆ. ಅಂದು ಖಾಸಗಿ ಬಸ್ ಬಂದ್ ಮಾಡಬೇಕ? ಅಥವಾ ಪ್ರತ್ಯೇಕವಾಗಿ ಬಂದ್ ಮಾಡಬೇಕ? ಎಂಬ ಬಗ್ಗೆ ನಿರ್ಧಾರ ಮಾಡಲಿದ್ದೇವೆ. ರಾಜ್ಯದಲ್ಲಿ ಒಟ್ಟು 14 ಸಾವಿರ ಖಾಸಗಿ ಬಸ್ಗಳಿದ್ದು, ಬೆಂಗಳೂರಿನಲ್ಲಿಯೇ ಎರಡೂವರೆ ಸಾವಿರ ಬಸ್ಗಳಿವೆ.
ಖಾಸಗಿ ಬಸ್ ದರ ಪ್ರತಿ ಸ್ಟೇಜ್ಗೆ 2 ರೂ. ಹೆಚ್ಚಳ ಮಾಡಲಾಗುತ್ತೆ. ಸ್ಟೇಜ್ ಕ್ಯಾರೇಜ್ ಬಸ್ ದರ ಏರಿಕೆ ಸರ್ಕಾರ ನಿರ್ಧರಿಸುತ್ತೆ. ಆದರೆ ನಾವು ಪ್ರತಿ ಟಿಕೆಟ್, ಪ್ರತಿ ಸ್ಟೇಜ್ಗೆ ದರ ಹೆಚ್ಚಳ ನಾವು ಮಾಡಬಹುಗಿದ್ದು, ಲಕ್ಸುರಿ, ಎಸಿ, ಸ್ಲೀಪರ್ ಟಿಕೆಟ್ ದರ ಶೇ.15ಷ್ಟು ದರ ಏರಿಕೆ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ಮಾರ್ಗಗಳ ಹೊಸ ದರಗಳು (ಪ್ರತಿ ಟಿಕೆಟ್):
ಮಾರ್ಗ | ಈಗಿನ ದರ | ಹೊಸ ದರ | ವೀಕೆಂಡ್ ದರ |
---|---|---|---|
ಬೆಂಗಳೂರು-ಹುಬ್ಬಳ್ಳಿ | ₹1,000–1,100 | ₹1,200–1,300 | ₹1,500 |
ಬೆಂಗಳೂರು-ಮಂಗಳೂರು | ₹900–1,100 | ₹1,200–1,500 | ₹1,500–1,800 |
ಬೆಂಗಳೂರು-ಬೆಳಗಾವಿ | ₹1,200 | ₹1,400 | ₹1,500–1,600 |
ಬೆಂಗಳೂರು-ಬಳ್ಳಾರಿ | ₹700–800 | ₹900–1,000 | ₹1,200 |
ಬೆಂಗಳೂರು-ಶಿವಮೊಗ್ಗ | ₹750 | ₹1,000 | ₹1,200 |
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54