ಬೆಂಗಳೂರು: ರಾಜ್ಯದಾದ್ಯಂತ ಉಷ್ಣಾಂಶದ ಮಟ್ಟವು ಗಂಭೀರವಾಗಿ ಏರುತ್ತಿದೆ. ಕಳೆದ 24 ಗಂಟೆಗಳಲ್ಲಿ ಕಲ್ಬುರ್ಗಿ 37.6°ಸೆ ಮತ್ತು ಬಾಗಲಕೋಟೆ 36.1°ಸೆ ಗರಿಷ್ಠ ಉಷ್ಣಾಂಶ ದಾಖಲಿಸಿದೆ. ಇದೇ ಸಮಯದಲ್ಲಿ, ಕಾರವಾರ, ವಿಜಯಪುರ, ಬೆಳಗಾವಿ, ಗದಗ, ಮತ್ತು ಧಾರವಾಡದಂತಹ ನಗರಗಳು 35°ಸೆ ಗರಿಷ್ಠ ತಾಪಮಾನವನ್ನು ದಾಖಲಿಸಿವೆ. ರಾಜಧಾನಿ ಬೆಂಗಳೂರಿನಲ್ಲಿ ಸಹ ಉಷ್ಣಾಂಶದ ಹಿಡಿತ ಹೆಚ್ಚಾಗುತ್ತಿದ್ದು, ನಗರದಲ್ಲಿ 33.4°ಸೆ ಮತ್ತು ಕೆಂಪೇಗೌಡ ವಿಮಾನನಿಲ್ದಾಣದಲ್ಲಿ 32.7°ಸೆ ದಾಖಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ರಾಜ್ಯದಾದ್ಯಂತ ಸರಾಸರಿ 2°ಸೆ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಕನಿಷ್ಠ ಉಷ್ಣಾಂಶವೂ ಸಹ ಏರುತ್ತಿರುವುದು ಚಿಂತೆಯ ವಿಷಯ. HAL ವಿಮಾನನಿಲ್ದಾಣದಲ್ಲಿ 32.5°ಸೆ ಗರಿಷ್ಠ ಮತ್ತು 18.4°ಸೆ ಕನಿಷ್ಠ ತಾಪಮಾನ ದಾಖಲಾಗಿದೆ.
ಹವಾಮಾನ ತಜ್ಞರು ಇದನ್ನು “ಎಲ್ ನಿನೊ ಪರಿಣಾಮ” ಮತ್ತು “ಗ್ಲೋಬಲ್ ವಾರ್ಮಿಂಗ್” ಸಂಭಂದಿತವೆಂದು ಹೇಳುತ್ತಾರೆ. ನೀರಿನ ಸಂರಕ್ಷಣೆ, ಛಾವಣಿಗಳಲ್ಲಿ ಹಸಿರು ಆವರಣ, ಮತ್ತು ಬಿಸಿಲಿನಿಂದ ಸ್ವಯಂ ರಕ್ಷಣೆಗೆ ಸೂಚನೆ ನೀಡಿದ್ದಾರೆ.
ಕಳೆದ 24 ಗಂಟೆಯ ಹವಾಮಾನ ವರದಿ:
ಕಲಬುರಗಿ – ಗರಿಷ್ಠ 37.6°ಸೆಲ್ಸಿಯಸ್ ಉಷ್ಣಾಂಶ ದಾಖಲು
ಬಾಗಲಕೋಟೆ – ಗರಿಷ್ಠ 36.1°ಸೆಲ್ಸಿಯಸ್ ಉಷ್ಣಾಂಶ
ಕಾರವಾರ, ವಿಜಯಪುರ, ಬೆಳಗಾವಿ, ಗದಗ, ಧಾರವಾಡ – 35°ಸೆಲ್ಸಿಯಸ್ ಉಷ್ಣಾಂಶ
ಬೆಂಗಳೂರು – 33.4°ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – 32.7°ಸೆಲ್ಸಿಯಸ್
HAL ಏರ್‌ಪೋರ್ಟ್ – 32.5°ಸೆಲ್ಸಿಯಸ್ ಗರಿಷ್ಠ, 18.4°ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ
ಮುಂದಿನ 48 ಗಂಟೆಗಳ ಮುನ್ಸೂಚನೆ
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ 2 ಡಿ.ಸೆ. ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದ ಕೆಲವು ಭಾಗಗಳಲ್ಲಿ ಉಷ್ಣತರಂಗದ ಎಚ್ಚರಿಕೆ ನೀಡಲಾಗಿದೆ.
ಪ್ರಜಾಜನರಿಗಾಗಿ ಮುನ್ನೆಚ್ಚರಿಕೆ:
ಬಿಸಿಲಿನಿಂದ ರಕ್ಷಿಸಲು ನೀರನ್ನು ಹೆಚ್ಚು ಸೇವಿಸಿ.
ಹೊರಗೆ ಹೋಗುವಾಗ ಗಾಳಿ ಹೀರಿಕೊಳ್ಳುವ ಬಟ್ಟೆ ಧರಿಸಿ.
ಮಧ್ಯಾಹ್ನ ಕಾಫಿ, ಚಹಾ, ಮದ್ಯ ಸೇವನೆ ತಗ್ಗಿಸಿ.
ಮಧ್ಯಾಹ್ನ 12:00-3:00 ಗಂಟೆಗಳ ಮಧ್ಯೆ ಹೊರಗೆ ಹೋಗುವುದು ತಪ್ಪಿಸಿ.