ಕರ್ನಾಟಕದಲ್ಲಿ ಗರಿಷ್ಠ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ವಿಶೇಷವಾಗಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ತೀವ್ರವಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 5 ದಿನಗಳಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆ ಇಲ್ಲ. ಆದರೆ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ 2-4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಬಹುದು.
ರಾಜ್ಯದ ಪ್ರಮುಖ ಪ್ರದೇಶಗಳ ತಾಪಮಾನ ವಿವರ
ಚಾಮರಾಜನಗರ: 13.1°C (ಅತ್ಯಂತ ಕಡಿಮೆ)
ಕಲಬುರಗಿ: 37.4°C (ಅತ್ಯಂತ ಹೆಚ್ಚೆಚ್ಚಿನ ಉಷ್ಣಾಂಶ)
ಕರಾವಳಿ: 33-34°C
ಉತ್ತರ ಒಳನಾಡು: 34-37°C
ಮಧ್ಯ ಕರ್ನಾಟಕ: 31-33°C (ಆಗೂಂಬೆ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಚಿಂತಾಮಣಿ, ಮಡಿಕೇರಿ)
ದಕ್ಷಿಣ ಒಳನಾಡು: 34-37°C (ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಶಿವಮೊಗ್ಗ)
ಉಷ್ಣತೆ ಹೆಚ್ಚಿದ ಪ್ರದೇಶಗಳು
ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ದಾವಣಗೆರೆ, ಹಾಸನ, ಮೈಸೂರು – ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ
ಕಾರವಾರ, ಹೊನ್ನಾವರ, ಮಂಗಳೂರು, ಪಣಂಬೂರು – ಕನಿಷ್ಠ ತಾಪಮಾನ ಹೆಚ್ಚು
ಕಲಬುರಗಿ, ಹಾವೇರಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ – ಸ್ವಲ್ಪ ಚಳಿ ಅಲೆಯಾಗಿದೆ
ಬೆಂಗಳೂರು ತಾಪಮಾನ ವಿವರ
ಎಚ್.ಎ.ಎಲ್. ವಾತಾವರಣ ಕೇಂದ್ರ: ಗರಿಷ್ಠ 32.0°C, ಕನಿಷ್ಠ 16.9°C
ನಗರ: ಗರಿಷ್ಠ 32.8°C, ಕನಿಷ್ಠ 17.8°C
ಕೆಐಎಎಲ್: ಗರಿಷ್ಠ 32.8°C, ಕನಿಷ್ಠ 17.3°C
ಜಿಕೆವಿಕೆ: ಗರಿಷ್ಠ 32.6°C, ಕನಿಷ್ಠ 17.0°C
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪ್ರಭಾವದಿಂದ ದೆಹಲಿಯಲ್ಲಿ ಮಳೆಯಾಗುತ್ತಿದೆ. ಜಾರ್ಖಂಡ್, ಹಿಮಾಚಲ ಪ್ರದೇಶ, ಸಿಕ್ಕಿಂ, ಮಣಿಪುರ, ನಾಗಾಲ್ಯಾಂಡ್, ಕೇರಳ ಕರಾವಳಿ ಸೇರಿದಂತೆ ಹಲವೆಡೆ ಮಳೆ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆ ಆದರೆ ಮಳೆಯ ಸಾಧ್ಯತೆ ಕಡಿಮೆ ಇದೆ.