ನಾಳೆಯಿಂದ 5 ದಿನ ಜೋರಾಗಲಿದೆ ಮಳೆಯ ಆರ್ಭಟ..!

Film 2025 04 19t222925.786

ರಾಜ್ಯದ್ಯಂತ ಒಂದೇರಡು ದಿನಗಳಿಂದ ಮಳೆಯಾಗುತ್ತಿದ್ದು, ನಾಳೆಯಿಂದ ರಾಜ್ಯದಲ್ಲಿ ಮಳೆರಾಯನ ಅಬ್ಬರ ಜೋರಾಗಲಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿದ್ದು, ಅದರ ಪರಿಣಾಮ ಕೆಲವು ರಾಜ್ಯಗಳ ಮೇಲಾಗಲಿದೆ. ಕರ್ನಾಟಕದ ಹಲವು ಜಿಲ್ಲೆಗಳ ಮೇಲೂ ಇದರ ಪರಿಣಾಮ ಬೀರಲಿದ್ದು, ಗುಡುಗು-ಮಿಂಚು, ಗಾಳಿ ಸಹಿತ ಮಳೆ ಪ್ರಮಾಣ ಜೋರಾಗಲಿದೆ.
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಂದೇರಡು ದಿನಗಳಿಂದ ಮಳೆಯಾಗುತ್ತಿದ್ದು, ಇನ್ನು ಮುಂದಿನ 5 ದಿನಗಳವರೆಗೆ ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಬೇಸಿಗೆ ಧಗೆಯಿಂದ ಹೈರಾಣಾಗಿದ್ದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳು ಇಂದಿನಿಂದ ಮಳೆಯ ಆರ್ಭಟದಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಹಲವೆಡೆ ಗುಡುಗು-ಮಿಂಚು, ಗಾಳಿ ಸಹಿತ ಸಾಧರಣ ಮತ್ತು ಹಗುರ ಮಳೆಯಾಗಲಿದೆ.

ಬಿಸಿಲಿನ ಬೆಗೆಯಿಂದ ಕೂಡಿರುವ ರಾಜ್ಯ ನಾಳೆಯಿಂದ ಮಳೆಯಿಂದಾಗಿ ಫುಲ್ ಕೂಲ್ ಕೂಲ್‌ ಆಗಲಿದೆ. ಇದೀಗ ನಗರದಲ್ಲಿ ಗರಿಷ್ಠ ಉಷ್ಣಾಂಶ ಪ್ರಮಾಣ 33.1 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ ಪ್ರಮಾಣ 21.0 ಡಿಗ್ರಿ ಸೆಲ್ಸಿಯಸ್‌‌‌‌ ನಷ್ಟಿದೆ. ಅದೇ ರೀತಿಯಾಗಿ ಇನ್ನು ಮುಂದೆ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ADVERTISEMENT
ADVERTISEMENT

ಇನ್ನು ರಾಜ್ಯದಲ್ಲಿ ಮುಂದಿನ 5 ದಿನದ ಮಳೆಗೆ ಚಂಡಮಾರುತ ಕಾರಣವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಕಂಡು ಬಂದಿದೆ. ಇದರ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇನ್ನು 5 ದಿನ ವರುಣನ ಆರ್ಭಟ ಜೋರಾಗಲಿದೆ. ಬೆಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಕಲಬುರಗಿ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ, ಗುಡುಗು-ಮಿಂಚು, ಗಾಳಿ ಸಹಿತ ಮಳೆಯಾಗಲಿದ್ದು, ರಾಜ್ಯದ ಜನರು ಮಳೆಯ ದೃಷ್ಠಿಯಿಂದ ಜಾಗರೂಕತೆ ವಹಿಸುವುದು, ಮನೆಯಿಂದ ಹೊರ ಬಂದಾಗ ಮರ, ವಿದ್ಯುತ್‌‌ ಕಂಬಗಳಿಂದ ದೂರ ಇರೋದು ಮತ್ತು ಛತ್ರಿ ಸಮೇತವಾಗಿ ಓಡಾಡುವುದು ಉತ್ತಮ.

Exit mobile version