ಚಿಣ್ಣರ ಖುಷಿಯ ಕ್ಷಣಗಳನ್ನು ನೋಡುವ ಆನಂದವೇ ಬೇರೆ. ಅದರಲ್ಲೂ ಮಕ್ಕಳ ಖುಷಿಯ ನೃತ್ಯ ಮನಸ್ಸಿಗೆ ಬಲು ಹಿತ ನೀಡುತ್ತದೆ. ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುತ್ತದೆ ಈ ಸಿಹಿ ಕ್ಷಣ.ಇಂತಹ ಸಿಹಿಯ ಕ್ಷಣಕ್ಕೆ ಸಾಕ್ಷಿಯಾಗಿದ್ದು ಗಣಿನಗರಿ ಬಳ್ಳಾರಿಯ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರ.
ಹೌದು ನಗರದ ಅಕೆಡಾಮಿಕ್ ಹೈಟ್ಸ್ ಹಾಗೆ ಬಚಪನ್ ಶಾಲೆಯ ಮಕ್ಕಳ ಐಕ್ಯಂ ಕಾರ್ಯಕ್ರಮ ನೆರದವರನ್ನು ಮೋಡಿ ಮಾಡಿತ್ತು. ಜನಪದ, ಸಿನಿಮಾ, ಕ್ಲಾಸಿಕಲ್ ಹೀಗೆ ಹಲವಾರು ಹಾಡಿಗೆ ಈ ಪುಟಾಣಿಗಳು ನೃತ್ಯ ಮಾಡುವ ದೃಶ್ಯ ಮನಸ್ಸಿಗೆ ಬಲು ಆನಂದವನ್ನು ನೀಡುವಂತಿತ್ತು. ಮಕ್ಕಳು ಸಾಂಪ್ರದಾಯಿಕ ದಿರಿಸು ತೊಟ್ಟು ಹರ್ಷಚಿತ್ತರಾಗಿ ಕುಣಿಯುವ ದೃಶ್ಯವನ್ನು ನೋಡುತ್ತಾ, ಇವರ ಖುಷಿ ಜೊತೆ ಜೊತೆಗೆ ನಮ್ಮ ಖುಷಿಯನ್ನೂ ಹೆಚ್ಚು ಮಾಡುವಂತಿತ್ತು.
ವಿದ್ಯಾರ್ಥಿಗಳ ಕಲರವ, ಮಕ್ಕಳು ಹಾಡಿ, ಕುಣಿದು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮೊದಲಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಸಂಸ್ಥೆಯ ನಿರ್ದೇಶಕಿ ಶಾರದಾ ಪ್ರೀಯಾ ಉದ್ಘಾಟಿಸಿದರು.
ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲಘು ಸಂಗೀತ, ಛದ್ಮವೇಷ, ಕಥೆ ಹೇಳುವುದು, ಅಭಿನಯ ಗೀತೆ, ಕ್ಲೈ ಮಾಡಲಿಂಗ್, ಜಾನಪದ ನೃತ್ಯ, ಕಂಸಾಳೆ ಸೇರಿ ಇನ್ನಿತರ ಕಲೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.