ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಏಪ್ರಿಲ್ 18ರಂದು ಮಂಗಳೂರು ನಗರದಲ್ಲಿ ನಡೆಯಲಿರುವ ಭಾರೀ ಪ್ರತಿಭಟನೆ ನಡೆಯಲಿದೆ. ಮಂಗಳೂರು ನಗರ ಪೊಲೀಸ್ ಇಲಾಖೆ ಸಂಚಾರ ದಟ್ಟಣೆ ತಡೆಗಟ್ಟಲು ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಲವು ಪ್ರಮುಖ ಭಾಗಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ವಾಹನ ಸಂಚಾರ ನಡೆಸುವಂತೆ ಕೋರಲಾಗಿದೆ.
ಪ್ರತಿಭಟನಾ ಸ್ಥಳ ಮತ್ತು ಸಮಯ
ಮಂಗಳೂರಿನ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಇಂದು ನಡೆಯಲಿರುವ ಪ್ರತಿಭಟನಾ ಸಮಾವೇಶದ ಹಿನ್ನೆಲೆಯಲ್ಲಿ, ಪಡೀಲ್-ಕಣ್ಣೂರು-ಅಡ್ಯಾರ್-ಸಹ್ಯಾದ್ರಿ-ಅರ್ಕುಳ ಮಾರ್ಗಗಳಲ್ಲಿ ಭಾರೀ ಸಂಚಾರ ದಟ್ಟಣೆ ಸಂಭವಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳ ಬಳಸುವಂತೆ ಸೂಚಿಸಲಾಗಿದೆ.
ಪರ್ಯಾಯ ಮಾರ್ಗಗಳು ಈ ರೀತಿ ಇವೆ
-
ಮೆಲ್ಕಾರ್ ಜಂಕ್ಷನ್ ಮೂಲಕ: ಮೆಲ್ಕಾರ್, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಕಡೆಗಳಿಂದ ಮಂಗಳೂರು ಅಥವಾ ಕಾಸರಗೋಡು ಕಡೆಗೆ ಬರುವ ವಾಹನಗಳು ಬೊಳಿಯಾರ್-ಮुडಿಪು-ದೇರಳಕಟ್ಟೆ-ತೊಕ್ಕೊಟ್ಟು ಮಾರ್ಗದಲ್ಲಿ ಸಂಚರಿಸಬೇಕು.
-
ಬಿ.ಸಿ.ರೋಡ್ ಮೂಲಕ: ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಅಥವಾ ಉಡುಪಿ ಕಡೆಗೆ ಹೋಗುವ ವಾಹನಗಳು ಪೊಳಲಿ ದ್ವಾರ-ಕಲ್ಪನೆ ಜಂಕ್ಷನ್-ನೀರುಮಾರ್ಗ-ಬೈತುರ್ಲಿ-ಕುಲಶೇಖರ-ನಂತೂರು ಮಾರ್ಗವನ್ನು ಅನುಸರಿಸಬೇಕು.
-
ವಳಚ್ಚಿಲ್ ಜಂಕ್ಷನ್: ಬಿ.ಸಿ.ರೋಡ್, ತುಂಬೆ, ಫರಂಗಿಪೇಟೆ ಕಡೆಯಿಂದ ಮಂಗಳೂರಿಗೆ ಬರುವ ಲಘು ವಾಹನಗಳು ವಳಚ್ಚಿಲ್ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು-ನೀರುಮಾರ್ಗ-ಬೈತುರ್ಲಿ-ನಂತೂರು ಮಾರ್ಗದಲ್ಲಿ ಸಾಗಬೇಕು.
-
ಅಡ್ಯಾರ್ ಕಟ್ಟೆ ಮೂಲಕ: ಈ ಭಾಗದಿಂದ ಬರುವ ಲಘು ವಾಹನಗಳು ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್-ಕೊಣಾಜೆ-ದೇರಳಕಟ್ಟೆ-ತೊಕ್ಕೊಟ್ಟು ಮೂಲಕ ಸಾಗಬಹುದು.
-
ಪಂಪ್ವೆಲ್ ಜಂಕ್ಷನ್: ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆ ಹೋಗುವ ವಾಹನಗಳು ತೊಕ್ಕೊಟ್ಟು-ದೇರಳಕಟ್ಟೆ-ಮುದಿಪು-ಬೊಳಿಯಾರ್-ಮೆಲ್ಕಾರ್ ಮಾರ್ಗವನ್ನು ಬಳಸಬೇಕು.
-
ನಂತೂರು ವೃತ್ತ: ಮಂಗಳೂರು ಅಥವಾ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆ ಸಾಗುವ ವಾಹನಗಳು ಬಿಕರ್ನಕಟ್ಟೆ-ಕುಲಶೇಖರ-ಬೈತುರ್ಲಿ-ನೀರುಮಾರ್ಗ-ಕಲ್ಪನೆ-ಪೊಳಲಿ ದ್ವಾರ ಮೂಲಕ ಸಂಚರಿಸಬೇಕು.
-
ಕೆ.ಪಿ.ಟಿ. ವೃತ್ತ: ಈ ಭಾಗದಿಂದ ಬಿ.ಸಿ.ರೋಡ್ ಕಡೆ ಸಾಗುವ ವಾಹನಗಳು ಪದವಿನಂಗಡಿ-ಪಚ್ಚನಾಡಿ-ವಾಮಂಜೂರು-ಬೈತುರ್ಲಿ ಅಥವಾ ಬೋಂದೆಲ್-ಕಾವೂರು-ಬಜಪೆ-ಕೈಕಂಬ-ಮೂಡುಬಿದಿರೆ ಮಾರ್ಗದಲ್ಲಿ ಸಾಗಬೇಕು.
-
ಉಡುಪಿ/ಮೂಲ್ಕಿ ಕಡೆಯಿಂದ: ಮೂಲ್ಕಿಯಿಂದ ಬಿ.ಸಿ.ರೋಡ್ ಕಡೆಗೆ ಸಾಗುವ ವಾಹನಗಳು ಕಿನ್ನಿಗೊಳಿ-ಮೂಡುಬಿದಿರೆ-ಸಿದ್ದಕಟ್ಟೆ-ಬಂಟ್ವಾಳ ಮಾರ್ಗವನ್ನು ಅನುಸರಿಸಬಹುದು. ಪಡುಬಿದ್ರಿಯಿಂದ ಬರುವವರು ಕಾರ್ಕಳ-ಮೂಡುಬಿದಿರೆ-ಸಿದ್ದಕಟ್ಟೆ-ಬಂಟ್ವಾಳ ಮಾರ್ಗವನ್ನು ಬಳಸಬೇಕು.
ಅತ್ಯಗತ್ಯ ಸೇವೆಗಳಿಗೆ ವಿನಾಯಿತಿ
ಸ್ಥಳೀಯ ನಿವಾಸಿಗಳು, ತುರ್ತು ಸೇವೆಗಳು ಮತ್ತು ಇತರ ಅಗತ್ಯ ಕಾರಣಗಳಿಗೆ ಸಂಚರಿಸುವ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಉಳಿದವರಿಗೆ ಪರ್ಯಾಯ ಮಾರ್ಗ ಬಳಸುವ ಅಗತ್ಯವಿದೆ.
ಪೊಲೀಸ್ ಇಲಾಖೆ ಮನವಿ
ಪ್ರತಿಭಟನೆಯಿಂದ ಸಂಭವಿಸಬಹುದಾದ ಸಂಚಾರ ದಟ್ಟಣೆ ತಪ್ಪಿಸಲು ಎಲ್ಲಾ ವಾಹನ ಸವಾರರು ಪೊಲೀಸ್ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.