ಗ್ಯಾರಂಟಿ ನ್ಯೂಸ್‌‌ ಚಾನಲ್‌ಗೆ ಶುಭ ಹಾರೈಸಿದ ಸಚಿವ ಹೆಚ್‌.ಸಿ ಮಹದೇವಪ್ಪ

ಗ್ಯಾರಂಟಿ ನ್ಯೂಸ್‌‌ ಕಚೇರಿಯಲ್ಲಿ ಸಚಿವ ಹೆಚ್‌.ಸಿ ಮಹದೇವಪ್ಪ

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು ಮಾಡಿತ್ತು. ಹಾಗೆಯೇ ವೆಬ್ ಸೈಟ್ ಮೂಲಕವೂ ಓದುಗರನ್ನು ಗ್ಯಾರಂಟಿ ನ್ಯೂಸ್ ತಲುಪಿತ್ತು. ಇದೀಗ ಸ್ಯಾಟಲೈಟ್ ವಾಹಿನಿ ಮೂಲಕ ಕರ್ನಾಟಕದಾದ್ಯಂತ ಲಭ್ಯವಿದೆ.

ADVERTISEMENT
ADVERTISEMENT

ಕನ್ನಡಿಗರ ಮನೆ ಮನೆಯಲ್ಲೂ ಮನೆಮಾತಾಗಲು ನಿಮ್ಮ ಮುಂದೆ ಈಗ ಗ್ಯಾರಂಟಿ ನ್ಯೂಸ್ ಚಾನೆಲ್ ಬರ್ತಿದ್ದು, ನೂತನವಾಗಿ ಆರಂಭಗೊಂಡ ಗ್ಯಾರಂಟಿ ಸುದ್ದಿ ವಾಹಿನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್‌ಸಿ ಮಹದೇವಪ್ಪ ಅವರು ಭಾಗವಹಿಸಿ, ಗ್ಯಾರಂಟಿ ನ್ಯೂಸ್‌ ಚಾನಲ್‌ಗೆ ಶುಭ ಕೋರಿದರು. ನಂತರ ಕಚೇರಿಯ ಎಲ್ಲಾ ವಿಭಾಗಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಗ್ಯಾರಂಟಿ ನ್ಯೂಸ್ ಎಂಡಿ ಟಿಎಂ ಶಿವಸ್ವಾಮಿ, ಪ್ರಧಾನ ಸಂಪಾದಕರಾದ ರಾಧಾ ಹಿರೇಗೌಡರ್, ಹಿರಿಯ ಸಂಪಾದಕರಾದ ಅರವಿಂದ ಸಾಗರ್, ಸಂಪಾದಕರಾದ ಸತೀಶ್ ಆಂಜನಪ್ಪ ಸೇರಿದಂತೆ ಗ್ಯಾರಂಟಿ ನ್ಯೂಸ್‌ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Exit mobile version