ಮುಸ್ಲಿಂ ಸರ್ಕಾರಿ ನೌಕರರಿಗೆ 1 ಗಂಟೆ ಮುಂಚಿತವಾಗಿ ಮನೆಗೆ ಹೋಗಲು ಅವಕಾಶ: ಸಿಎಂಗೆ ಮನವಿ

ಮುಸ್ಲಿಂ ಸರ್ಕಾರಿ ನೌಕರರಿಗೆ 1 ಗಂಟೆ ಮುಂಚಿತವಾಗಿ ಮನೆಗೆ ಹೋಗಲು ಅವಕಾಶ: ಸಿಎಂಗೆ ಮನವಿ

Cm siddaramaiah

ಬೆಂಗಳೂರು: ಮುಸ್ಲಿಂ ಸರ್ಕಾರಿ ನೌಕರರಿಗೆ ರಂಜಾನ್ ತಿಂಗಳಲ್ಲಿ ಉಪವಾಸಕ್ಕೆ ಅನುಕೂಲ ಮಾಡಿಕೊಡಲು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವೈ. ಸಯ್ಯದ್ ಅಹ್ಮದ್ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ತೆಲಂಗಾಣದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮುಸ್ಲಿಂ ಸರಕಾರಿ ನೌಕರರಿಗೆ 1 ಗಂಟೆ ಮುಂಚಿತವಾಗಿ ಮನೆಗೆ ತೆರಳಲು ಅವಕಾಶ ನೀಡುವಂತೆ ಕೋರಿದ್ದಾರೆ.

ಮುಸ್ಲಿಂ ನೌಕರರ ಕೆಲಸದ ಅವಧಿ ಕಡಿತಗೊಳಿಸಲು ಮನವಿ

ರಂಜಾನ್ ತಿಂಗಳು ಮುಸ್ಲಿಮರು ಪವಿತ್ರ ಉಪವಾಸ ಆಚರಿಸುವ ಸಮಯವಾಗಿದ್ದು, ಈ ಸಂದರ್ಭದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕೆಲಸದ ಹೊರೆ ಕಡಿಮೆಯಾಗುವಂತೆ ಪರಿಗಣನೆ ಮಾಡಬೇಕು ಎಂಬುದು ಮನವಿಯ ಉದ್ದೇಶ. ಈಗಾಗಲೇ ತೆಲಂಗಾಣ ಸರ್ಕಾರ ಈ ನಿಯಮವನ್ನು ಜಾರಿಗೆ ತಂದು, ಮಾರ್ಚ್ 1 ರಿಂದ ಮಾರ್ಚ್ 31, 2025 ರವರೆಗೆ ಮುಸ್ಲಿಂ ನೌಕರರು ಸಂಜೆ 4 ಗಂಟೆಗೆ ಕಚೇರಿಯಿಂದ ಹೊರಡುವಂತೆ ಅನುಮತಿ ನೀಡಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಆದೇಶ ಹೊರಡಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT
ADVERTISEMENT
ತೆಲಂಗಾಣದಲ್ಲಿ ಆದೇಶ – ಕರ್ನಾಟಕದಲ್ಲೂ ನಿರೀಕ್ಷೆ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಮುಸ್ಲಿಂ ನೌಕರರು ಸುಲಭವಾಗಿ ಉಪವಾಸ ಮುಗಿಸಬಹುದು ಎಂಬ ಕಾರಣಕ್ಕೆ ಈ ಅನುಕೂಲ ನೀಡಲಾಗಿದೆ. ಆದರೆ ಈ ನಿರ್ಧಾರದ ವಿರುದ್ಧ ಬಿಜೆಪಿಯು ಆಕ್ಷೇಪ ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ನಿರ್ಧಾರ ಏನಾಗಬಹುದು?

ಕರ್ನಾಟಕದಲ್ಲಿ ಈ ಮನವಿಗೆ ಸರ್ಕಾರ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆಯೆಂಬುದನ್ನು ಕಾಯಬೇಕು. ಹಿಂದಿನ ವರ್ಷಗಳಲ್ಲೂ ಈ ರೀತಿಯ ಬೇಡಿಕೆಗಳು ಬಂದಿದ್ದರೂ ನಿರ್ಧಾರ ಕೈಗೊಳ್ಳಲಾಗಿರಲಿಲ್ಲ. ಆದರೆ ಈಗ ತೆಲಂಗಾಣದ ಮಾದರಿಯಲ್ಲಿ ಕರ್ನಾಟಕದಲ್ಲೂ ಈ ಹೊಸ ನಿಯಮ ಜಾರಿಯಾಗಬಹುದೇ ಎಂಬುದನ್ನು ಗಮನಿಸಬೇಕಾಗಿದೆ.

Exit mobile version