ಪೋಪ್ ಫ್ರಾನ್ಸಿಸ್ ನಿಧನ ಹಿನ್ನೆಲೆ ರಾಜ್ಯ ಸರ್ಕಾರದಿಂದ ಎರಡು ದಿನ ಶೋಕಾಚರಣೆ

Untitled design 2025 04 22t185256.174

ಕ್ರೈಸ್ತ ಜಗತ್ತಿನ ಪರಮೋಚ್ಚ ಧರ್ಮಗುರು, ‘ಹಿಸ್ ಹೊಲಿನೆಸ್ ಪೋಪ್ ಫ್ರಾನ್ಸಿಸ್’ ಅವರು ಏಪ್ರಿಲ್ 21 ರಂದು ಬೆಳಗ್ಗೆ 7.35ಕ್ಕೆ ನಿಧನರಾಗಿದ್ದಾರೆ. 88 ವರ್ಷದ ಪೋಪ್ ಫ್ರಾನ್ಸಿಸ್ ಕಳೆದ ಕೆಲ ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈಸ್ಟರ್ ಸಂಡೇ ಸಂದರ್ಭದಲ್ಲಿ ಅವರು ಸಾರ್ವಜನಿಕ ದರ್ಶನ ನೀಡಿದ್ದರು. ಆದರೆ ದಿನದ ನಂತರದ ದಿನವೇ ಅವರು ಇಹಲೋಕ ತ್ಯಜಿಸಿದ್ದಾರೆ.

ಪೋಪ್ ಫ್ರಾನ್ಸಿಸ್ ನಿಧನಕ್ಕೆ ಗೌರವ ಸೂಚಿಸಿ ಭಾರತ ಸರ್ಕಾರ ಏಪ್ರಿಲ್ 22 ಮತ್ತು 23ರಂದು ಎರಡು ದಿನಗಳ ಶೋಕಾಚರಣೆ ಘೋಷಿಸಿದೆ. ಈ ಸಮಯದಲ್ಲಿ ದೇಶಾದ್ಯಂತ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು. ಯಾವುದೇ ಸರ್ಕಾರಿ ಮನೋರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ರಾಜ್ಯ ಸರ್ಕಾರಗಳು ಕೂಡ ಈ ಆದೇಶವನ್ನು ಅನುಸರಿಸಲಿದೆ.

ADVERTISEMENT
ADVERTISEMENT

ಪೋಪ್ ಫ್ರಾನ್ಸಿಸ್ ತಮ್ಮ ಸೇವಾ ಅವಧಿಯಲ್ಲಿ ಕ್ರೈಸ್ತ ಧರ್ಮದ ಹಿತಕ್ಕಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು. ಅವರು ಕೇವಲ ಧಾರ್ಮಿಕ ನಾಯಕನಷ್ಟೇ ಅಲ್ಲದೆ, ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದರು. ಶಾಂತಿ, ಸಹಿಷ್ಣುತೆ ಮತ್ತು ಬಡವರ ಹಕ್ಕುಗಳ ಪರ ಧ್ವನಿ ಎತ್ತಿದ ಅವರ ಜೀವನ ಯುಗಾಂತರದ ದೀಪವಾಗಿತ್ತು.

ವ್ಯಾಟಿಕನ್ ಹೊರಗೆ ಪೋಪ್ ಅಂತ್ಯಕ್ರಿಯೆ

ಪೋಪ್‌ಗಳ ಅಂತ್ಯಕ್ರಿಯೆ ಸಾಮಾನ್ಯವಾಗಿ ವ್ಯಾಟಿಕನ್ ಸಿಟಿಯಲ್ಲಿಯೇ ನಡೆಯುತ್ತದೆ. ಆದರೆ ಈ ಬಾರಿ ಪೋಪ್ ಫ್ರಾನ್ಸಿಸ್ ಅವರ ವೈಯಕ್ತಿಕ ಇಚ್ಛೆಯಂತೆ, ಅಂತ್ಯಕ್ರಿಯೆಯನ್ನು ರೋಮ್‌ನಲ್ಲಿ ನಡೆಸಲಾಗುತ್ತಿದೆ. ಕಳೆದ ಶತಮಾನದಲ್ಲಿ ಇದೇ ಮೊದಲ ಬಾರಿಗೆ ಪೋಪ್‌ನ ಅಂತ್ಯಕ್ರಿಯೆ ವ್ಯಾಟಿಕನ್ ಹೊರಗಡೆ ನಡೆಯುತ್ತಿದೆ ಎಂಬುದು ವಿಶೇಷ.

ಪೋಪ್ ನಿಧನದ ನಂತರ ತಾತ್ಕಾಲಿಕವಾಗಿ ಆಡಳಿತ ನಿರ್ವಹಿಸುವ ವ್ಯಕ್ತಿಯು ಪೋಪ್‌ರ ನಿವಾಸಕ್ಕೆ ಬೀಗ ಹಾಕುತ್ತಾರೆ. ಅಲ್ಲಿನ ಎಲ್ಲಾ ಅಧಿಕೃತ ಚಿಹ್ನೆಗಳಾದ ಉಂಗುರ ಮತ್ತು ಸೀಲ್ ನಾಶಪಡಿಸಲಾಗುತ್ತದೆ. ಇದರಿಂದ ಅವರ ಆಳ್ವಿಕೆ ಅಂತ್ಯಗೊಂಡಿದೆ ಎಂಬುದನ್ನು ಸೂಚಿಸಲಾಗುತ್ತದೆ.

ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಪೋಪ್ ನಿಧನದ 15 ರಿಂದ 20 ದಿನಗಳೊಳಗೆ ನೂತನ ಪೋಪ್ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಕಾರ್ಡಿನಲ್‌ಗಳನ್ನು ವ್ಯಾಟಿಕನ್‌ಗೆ ಆಹ್ವಾನಿಸಲಾಗುತ್ತದೆ. ಅವರು ಮತದಾನಕ್ಕೆ ಸೇರಿದ ನಂತರ, ಒಂದು ನಿರ್ದಿಷ್ಟ ಸ್ಥಳದಲ್ಲಿ ಅವರನ್ನು ಉಳಿಸಿ, ಹೊರಜಗತ್ತಿನಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳಿಸಲಾಗುತ್ತದೆ.

ಮತದಾನದ ಪ್ರಕ್ರಿಯೆಯಲ್ಲಿ, ಅಭ್ಯರ್ಥಿಗಳ ಪರವಾಗಿ ಕಾರ್ಡಿನಲ್‌ಗಳು ಮತ ಚಲಾಯಿಸುತ್ತಾರೆ. ಮೂರು ಭಾಗದ ಎರಡು ಭಾಗಗಳಷ್ಟು ಬಹುಮತ ಪಡೆದವರೇ ಪೋಪ್ ಆಗಿ ಆಯ್ಕೆಯಾಗುತ್ತಾರೆ. ಪ್ರತಿಯೊಂದು ವಿಫಲ ಮತದಾನ ಸುತ್ತಿನ ಬಳಿಕ, ಮತಪತ್ರಗಳನ್ನು ಸುಡಲಾಗುತ್ತದೆ. ಈ ವೇಳೆ ವ್ಯಾಟಿಕನ್‌ನಲ್ಲಿ ಕಪ್ಪು ಹೊಗೆ ಹೊರಬರುತ್ತದೆ. ಇದರರ್ಥ ಹೊಸ ಪೋಪ್ ಆಯ್ಕೆ ಆಗಿಲ್ಲ. ಆಯ್ಕೆಯಾಗುವವರೆಗೆ ಮತದಾನ ಮುಂದುವರೆಯುತ್ತದೆ.

ಒಂದು ಬಾರಿ ಬಹುಮತ ಸಿಕ್ಕ ಬಳಿಕ, ವ್ಯಾಟಿಕನ್ ನಿಂದ ಬಿಳಿ ಹೊಗೆ ಹೊರಬರುತ್ತದೆ. ಇದರರ್ಥ ಹೊಸ ಪೋಪ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಜಗತ್ತಿಗೆ ತಿಳಿಸಲಾಗುತ್ತದೆ. ನೂತನ ಪೋಪ್‌ರಾಗಿ ನೇಮಕವಾಗುವವರೆಗೂ ಈ ಪ್ರಕ್ರಿಯೆ ನಿಶ್ಚಿತ ಪ್ರೊಟೋಕಾಲ್‌ನಂತೆ ಸಾಗುತ್ತದೆ.

Exit mobile version