ವಿಧಾನ ಪರಿಷತ್‌‌‌ನಲ್ಲಿ ಮಾತಿನ ಎದುರೇಟು ನೀಡಿದ ಸಚಿವ ಸಂತೋಷ್‌ ಲಾಡ್‌

ಸಿ ಎಂ ಸಿದ್ದರಾಮಯ್ಯ ಪಕ್ಕದಲ್ಲಿ ಬಂಡೆಯಂತೆ ನಿಂತ ಕಾರ್ಮಿಕ ಸಚಿವ ಸಂತೋಷ್ ಲಾಡ್

Befunky collage 2025 03 18t193738.448

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳಿಗೆ ವಿನಿಯೋಗಿಸಿದ ಹಣ ಹಾಗೂ ಇತರ ಯೋಜನೆಗಳಿಗೆ ಮೀಸಲಿಟ್ಟ ಹಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ನಲ್ಲಿ ವಿವರಿಸುವ ವೇಳೆ ವಿರೋಧಪಕ್ಷಗಳು ಅಡ್ಡಿಪಡಿಸಿದ ವೇಳೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ತಕ್ಕ ಪ್ರತ್ಯುತ್ತರ ನೀಡಿ ಗಮನ ಸೆಳೆದರು. ಪ್ರತಿಪಕ್ಷಗಳ ಪ್ರತಿ ಪ್ರಶ್ನೆಗೂ ಖಡಕ್ ಟಕ್ಕರ್ ಕೊಟ್ಟು ಸೈ ಎನಿಸಿಕೊಂಡರು.

ಮುಖ್ಯಮಂತ್ರಿಗಳು ಮಾತನಾಡುವ ವೇಳೆಯಲ್ಲಿ ಮಧ್ಯಪ್ರವೇಶ ಮಾಡಿ ಮಾತನಾಡಲು ಬಿಡದ ಗದ್ದಲ ಉಂಟು ಮಾಡುತ್ತಿದ್ದ ವಿರೋಧಪಕ್ಷದ ಸದಸ್ಯರಿಗೆ ಲಾಡ್‌ ಅವರು ಟಕ್ಕರ್‌ ನೀಡಿದರು.

ADVERTISEMENT
ADVERTISEMENT

ಮನಮೋಹನ್‌ ಸಿಂಗ್‌ ಅವರು ಪ್ರಧಾನಿಗಳಾಗಿದ್ದಾಗ ತೈಲ ಬೆಲೆ ಎಷ್ಟು ಇತ್ತು. ಈಗ ಎಷ್ಟು ಆಗಿದೆ.
ಈಗ ಬೆಲೆ ಏರಿಕೆ ಆಗಿದೆ. ಗ್ರಾಮ ಪಂಚಾಯತಿ ಚುನಾವಣೆಯಿಂದ ಅಸೆಂಬ್ಲಿ ಚುನಾವಣೆ ವೆಚ್ಚ ಅಧಿಕವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ರಾಜ್ಯಪಾಲರ ಭಾಷಣ ವಾಸ್ತವಾಂಶಗಳನ್ನು ಹೇಳಿದೆ. ಸತ್ಯ ಹೇಳುವ ಪ್ರಯತ್ನ ಮಾಡಿದೆ ಮುಂದಿನ ಗುರಿ ಏನು ಎಂಬುದನ್ನು ತಿಳಿಸಿದೆ. ಯಾವುದೇ ಅವಾಸ್ತವಿಕ ಅಂಶ ಹೇಳಿಲ್ಲ. ವಂದನಾ ನಿರ್ಣಯ ಮಂಡಿಸಿ ಒಕ್ಕೊರಲನಿಂದ ಅಂಗೀಕಾರ ಮಾಡೋಣ ಎಂದು ಮುಖ್ಯಮಂತ್ರಿಗಳು ಹೇಳಿದಾಗ ವಿರೋಧ ಪಕ್ಷದವರು ಗದ್ದಲ ಮಾಡಿದರು. ಆಗ ಸಚಿವ ಲಾಡ್‌ ಅವರು, ಎದ್ದು ನಿಂತು ಉತ್ತರ ನೀಡಿದರು.

ಸದಸ್ಯರಾದ ಸಿ ಟಿ ರವಿ ಅವರು, ಮಾತನಾಡಿ ಮೋದಿ ಸರ್ಕಾರ ಜನರಿಗೆ ಏನು ನೀಡಿದೆ ಎಂಬುದನು ವಿವರಿಸಿದರು. ರೈಟ್‌ ಆಪ್‌ ಲೇ ಆಪ್‌ ಕುರಿತು ಮಾತನಾಡಿದರು.

ಕಳೆದ ಹತ್ತು ವರ್ಷದಲ್ಲಿ ಮೋದಿ ಅವರ ಸರ್ಕಾರ ಎಷ್ಟು ಸಾಲ ಮನ್ನಾ ಮಾಡಿದ ಎಂದು ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು. ಆಗ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಚಿವ ಲಾಡ್‌ ಅವರು ಮುಖ್ಯಮಂತ್ರಿಗಳ ಪರವಾಗಿ ಮಾತನಾಡಿ ವಿರೋಧಪಕ್ಷದವರು ಸುಮ್ಮನಾಗುವಂತೆ ಮಾಡಿದರು.

ಮುಖ್ಯಮಂತ್ರಿಗಳು ದಾಖಲೆ ಬಜೆಟ್‌ ಮಂಡಿಸಿದ್ದನ್ನು ಉದ್ದೇಶಿಸಿ ಸಿ ಟಿ ರವಿ ಅವರು ಮಾತನಾಡಿ ಸಾಲ ಮಾಡಿದ ಕೀರ್ತಿ ಸಹ ನಿಮ್ಮದಾಗುತ್ತೆ ಎಂದು ಹೇಳಿದರು. ಆಗ ಸಚಿವ ಲಾಡ್‌ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಉದ್ಯಮಿಗಳ ಸಾಲ ಮನ್ನಾ ಬಗ್ಗೆ ಸಿ ಟಿ ರವಿ ಅವರು ವಿವರಿಸಿದ ನಂತರ, ಆಗಿನ ಹಣಕಾಸು ಸಚಿವರಾದ ಚಿದಂಬರಂ ಹಾಗೂ ಸೋನಿಯಾ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ಇಡೀ ಸದನ ಗದ್ದಲದಲ್ಲಿ ಮುಳುಗಿತು. ಈ ವೇಳೆ ತೀವ್ರ ಆಕ್ರೋಶಗೊಂಡ ಸಚಿವ ಲಾಡ್‌ ಅವರು ಸಿ ಟಿ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ರವಿ ಅವರು ಮಾತಿಗೆ ಬುದ್ಧಿವಂತಿಗೆ ಇದೆಯೇ, ಸೋನಿಯಾ ಮತ್ತ ಚಿದಂಬರಂ ಅವರ ಹೆಸರನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಂತೋಷ್‌ ಲಾಡ್‌ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಸದನದಲ್ಲಿ ಇಲ್ಲದವರ ಹೆಸರನ್ನು ಕಲಾಪದಲ್ಲಿ ಹೇಳಬಾರದು. ಆದ್ದರಿಂದ ಕಡತದಿಂದ ತೆಗೆದು ಹಾಕಲಾಗುವುದು ಎಂದು ಹೇಳಿದರು.

ಒಟ್ಟಾರೆ ಇಡೀ ದಿನದ ಕಲಾಪದಲ್ಲಿ ಸಚಿವ ಸಂತೋಷ್‌ ಲಾಡ್‌ ಅವರು ವಿರೋಧ ಪಕ್ಷದವರಿಗೆ ತಕ್ಕ ಪ್ರತ್ಯುತ್ತರ ನೀಡಿ ಇಡೀ ಸದನದ ಗಮನಸೆಳೆದರು.

Exit mobile version