ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆಯೊಂದು ಶುರುವಾಗಿದೆ. ಸದನ, ರನ್ಯಾ, ಗ್ಯಾರಂಟಿ ಗಲಾಟೆ ಮಧ್ಯೆ ಈಗ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.ಅದೇನಂದ್ರೆ ಅದು ಹನಿಟ್ರ್ಯಾಪ್,ಈ ರಾಜಕಾರಣಿಗಳಿಗೆ ಅದೇನಾಗುತ್ತೋ ಗೊತ್ತಿಲ್ಲ ಇಂಥಾ ಕೇಸ್‌ಗಳು ಹೆಚ್ಚಾಗಿ ಪಾಲಿಟಿಕ್ಸ್ ನಲ್ಲೇ ಕೇಳಿ ಬರುತ್ತೆ. ಈಗ್ಲೂ ಅದೇ ಸುದ್ದಿ ಹೊರ ಬಿದ್ದಿದ್ದು, ಆ ನಾಯಕ ಬೇರ್ಯಾರು ಅಲ್ಲ, ಪ್ರಭಾವಿ ಸಚಿವರೇ ಅನ್ನೋ ಸುದ್ದಿ ಹಬ್ಬಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹನಿಟ್ರ್ಯಾಪ್ ಉರುಳು ಸುತ್ತಿಕೊಂಡಿದೆ. ಸೀರೆ ಸೆರಗಿಗೆ ಮತ್ತೊಬ್ಬ ಮಂತ್ರಿ ಜಾರಿ ಬಿದ್ದಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ.ದೊಡ್ಡ ಮಿನಿಸ್ಟರ್ ಒಬ್ರು ಜಡೆ ಹಿಂದೆ ಹೋಗಿ ಈಗ ಲಾಕ್ ಆಗಿದ್ದಾರೆ ಅಂತಾ ಹೇಳಲಾಗ್ತಿದೆ.ವಿಧಾನಸೌಧದಲ್ಲಿ ಇರಬೇಕಿದ್ದ ಮಿನಿಸ್ಟರ್ ಆಕೆ ಹಿಂದೆ ಹೋಗಿ ತಗ್ಲಾಕ್ಕೊಂಡಿದ್ದಾರ.
ರಾಜಕಾರಣದಲ್ಲಿ ಈಗಾಗ್ಲೇ ಸಿಕ್ಕಾಪಟ್ಟೆ ಸಿಡಿಗಳು ಬಂದು ಹೋಗಿವೆ. ಎಷ್ಟೋ ಕರ್ಮಕಾಂಡಗಳು ಕಂಡ ಕಂಡವರ ಮೊಬೈಲ್‌ನಲ್ಲಿ ಹರಿದಾಡುತ್ತಿವೆ. ಮತ್ತಷ್ಟು ರಾಜಕಾರಣಿಗಳು ಮಾಧ್ಯಮಗಳಲ್ಲೂ ಬೆತ್ತಲೆಯಾಗಿದ್ದಾರೆ.ಇನ್ನೂ ಕೆಲವ್ರೂ ನಮ್ದೇನು ತೋರ್ಸೋದು ಬೇಡ ಅಂತಾ. ಕೋರ್ಟ್‌ನಿಂದ ಮೊದಲೇ ಸ್ಟೇ ತಂದು ನಾವ್ ಸದ್ಯಕ್ಕೆ ಸೇಫ್ ಆದ್ವಿ ಅಂತಾನೂ ಕೂತಿದ್ದಾರೆ.ಒಟ್ನಲ್ಲಿ ಮಾಡಬಾರದನ್ನು ಮಾಡಿ ಆಮೇಲೆ ಕೈ ಕೈ ಹಿಸುಕಿಕೊಳ್ಳೋದು ಕಾಮನ್.
ಆದ್ರೀಗ ಅದೇ ಸಾಲಿನಲ್ಲಿ ಮತ್ತೊಂದು ಸಿ.ಡಿ ಸಿಡಿಯೋಕೆ ಸಜ್ಜಾಗಿದೆ ಅಂತಾ ಹೇಳಲಾಗ್ತಿದೆ. ಅದ್ರಲ್ಲೂ ಸೀನಿಯರ್ ಆಗಿರೋ ಈ ಮಿನಿಸ್ಟರ್ ಟೀನೇಜ್ ಹುಡುಗಿ ಆಸೆಗೆ ಬಿದ್ದು ತಮ್ಮ ರಾಜರಹಸ್ಯವನ್ನೇ ಮತ್ತೊಬ್ಬರಿಗೆ ಬಿಟ್ಟುಕೊಟ್ಟಿದ್ದಾರೆ. ದಿನಾ ಬೆಳಗಾದ್ರೆ ಮೀಡಿಯಾ ಮುಂದೆ ಬಂದು ಮಾತಾಡ್ತಿದ್ದ ಸಚಿವ ಈ ವಿಚಾರ ಗೊತ್ತಾಗ್ತಿದ್ದಂತೆ ಮಾಧ್ಯಮದ ಮುಂದೆ ಅಲ್ಲ ಮನೆ ಬಿಟ್ಟೂ ಆಚೆ ಬರ್ತಿಲ್ಲವಂತೆ.
ಸಚಿವ್ರು ಸೀನಿಯರ್ ಇರ್ಬಹುದು, ಆದ್ರೆ ಆಸೆ ಅನ್ನೋದು ಮುಪ್ಪಾಗಲ್ಲ ಅಂತಾ ಹೇಳಬಹುದು. ಈಗಾಗ್ಲೇ ಅವ್ರಿಗಿಂತ ಎಷ್ಟೋ ಸೀನಿಯರ್ ಹನಿ ಕೆಂಡ್ಡಾದಲ್ಲಿ ಬಿದ್ದಿದ್ದಾರೆ, ಹನಿ ತುಂಬಿಕೊಂಡು ಹೋಗಿದ್ದ ಮದನಾರಿಗೆ ಅದೇ ಪಕ್ಷದ ಮತ್ತೊಬ್ಬ ಪವರ್ ಫುಲ್ ಮಿನಿಸ್ಟರ್ ಒಬ್ರು ಸಪೋರ್ಟ್ ಮಾಡಿದ್ರು ಅನ್ನೋ ಸ್ಫೋಟಕ ಮಾಹಿತಿಯೂ ಹೊರ ಬಿದ್ದಿದೆ.
ಅದ್ಕೂ ಕಾರಣ ಇದ್ಯಂತೆ.ಕೆಲ ದಿನಗಳ ಹಿಂದೆ ಲಾಕ್ ಆಗಿರೋ ಮಂತ್ರಿ ಬೇಕಾಬಿಟ್ಟಿ ಎಗರಾಡ್ತಿದ್ರಂತೆ ಅದಕ್ಕೆ ಅಂತಲೇ ಅವರನ್ನು ಸಂಪೂರ್ಣವಾಗಿ ಕುಗ್ಗಿಸಲು ಹನಿಟ್ರಾಪ್ ಬಲೆ ಬೀಸಿದ್ರಂತೆ. ಡೇರಿಂಗ ಮಿನಿಸ್ಟರ್ ಪಬ್ಲಿಕ್ ಆಗಿ ಮಾತನಾಡಿದ್ದಕ್ಕೆ ಪಲ್ಲಂಗದಲ್ಲೇ ಅವರನ್ನು ಕಟ್ಟಿಹಾಕಿದ್ದಾರೆ ಎಂದು ಹೇಳಲಾಗ್ತಿದೆ.
ಈ ಬಗ್ಗೆ ಕಾಂಗ್ರೆಸ್‌ನ ಕೆಲ ಮಿನಿಸ್ಟರ್‌ಗಳೇ ಹೇಳಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ನಡೆಯುತ್ತಲೇ ಇರುತ್ತೆ, ನಾವು ಎಚ್ಚರಿಕೆಯಿಂದ ಇರಬೇಕು ಅಂತಾ ತಿಮ್ಮಾಪುರ ಹೇಳಿದ್ರೆ, ಹನಿಟ್ರ್ಯಾಪ್ ಮಾಡೋದು ಅಸಹ್ಯದ ಕೆಲಸ, ರಾಜ್ಯ ರಾಜಕೀಯಕ್ಕೆ ಇದೊಂದು ಕಳಂಕ ಅಂಟಿದೆ ಅಂತಾ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಹನಿಟ್ರಾಪ್ ಆಗಿರೋದು ಪಕ್ಕಾ, ಈ ಸೀನಿಯರ್ ಮಂತ್ರಿದು ಸಿಡಿ ಇರೋದು ಪಕ್ಕಾ ಅನ್ನೋದ್ರಲ್ಲಿ ಡೌಟೇ ಇಲ್ಲ. ಅವತ್ತು ರಾತ್ರಿ ಈ ಬ್ಯೂಟಿ ಜೊತೆ ರಾಜಿ ಆಗಿದ್ದಕ್ಕೆ ಈಗ ಅವ್ರು ರಾಜೀನಾಮೆ ಕೊಡ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ಅಲ್ಲಿ ಕಚ್ಚೆ ಬಿಚ್ಚಿ ಈಗ ಇಲ್ಲಿ ಅಧಿಕಾರ ಬಿಡೋ ಪರಿಸ್ಥಿತಿ ಅವ್ರಿಗೆ ಬಂದ್ಬಿಟ್ಟಿದೆ. ಅಂದು ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದೇ ರಾತ್ರಿ ಮಂತ್ರಿಯೊಬ್ರು ಹನಿ ಕುಡಿಯಲು ಹೋಗಿ ಎಲ್ಲರ ಎದುರು ಬೆತ್ತಲಾಗಿದ್ರು, ಈಗ ಕಾಂಗ್ರೆಸ್ ಸರ್ಕಾರದಲ್ಲೂ ಸಚಿವರೊಬ್ರು ಮದವೇರಿಸಿಕೊಂಡು ಹೋಗಿ ಮನೆಯಲ್ಲೇ ಮಲಗೋ ಪರಿಸ್ಥಿತಿ ಬಂದಿದೆ.