ಸಂಸದ ತೇಜಸ್ವಿ ಸೂರ್ಯ- ಗಾಯಕಿ ಶಿವಶ್ರೀ ಮದುವೆ ದಿನಾಂಕ ಫಿಕ್ಸ್

ಸಂಸದ ತೇಜಸ್ವಿ ಸೂರ್ಯ ಮದುವೆ ದಿನಾಂಕ ಫಿಕ್ಸ್

Tejasvi surya

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರ ಮದುವೆ ಸುದ್ದಿ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿದೆ. ಇದೀಗ, ಮದುವೆಯ ದಿನಾಂಕ, ಸ್ಥಳ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮದುವೆ ದಿನಾಂಕ ಹಾಗೂ ಸ್ಥಳ:

ತೇಜಸ್ವಿ ಸೂರ್ಯ ಮತ್ತು ಚೆನ್ನೈನ ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರ ವಿವಾಹ ಸಮಾರಂಭ ಮಾರ್ಚ್ 5 ಮತ್ತು 6 ರಂದು ನಡೆಯಲಿದೆ. ಮದುವೆಯ ಸಂಭ್ರಮವು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ನಡೆಯಲಿದ್ದು, ಇದರಲ್ಲಿ ಕುಟುಂಬ, ಆಪ್ತರು ಮತ್ತು ಕೆಲವೇ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿದೆ.

ADVERTISEMENT
ADVERTISEMENT

ಸಮಾರಂಭದ ಸಡಗರ:

ಮಾರ್ಚ್ 5 (ಬುಧವಾರ): ಸಂಜೆ ವರಪೂಜೆ ಕಾರ್ಯಕ್ರಮ.
ಮಾರ್ಚ್ 6 (ಗುರುವಾರ): ಬೆಳಗ್ಗೆ ಕಾಶಿಯಾತ್ರೆ, ಜೀರಿಗೆ-ಬೆಲ್ಲ ಮುಹೂರ್ತ, ತುಲಾ ಲಗ್ನದಲ್ಲಿ (9:30–10:15 AM) ಮಂಗಳಸೂತ್ರ ಧಾರಣೆ. ನಂತರ ವಧುವನ್ನು ಗಿರಿನಗರದ ನಿವಾಸಕ್ಕೆ ಕರೆದೊಯ್ಯಲಾಗುತ್ತದೆ.
ಮಾರ್ಚ್ 9 (ಭಾನುವಾರ): ಆರತಕ್ಷತೆ ಸಮಾರಂಭವು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ 10:30 AM ರಿಂದ 1:30 PM ವರೆಗೆ ನಡೆಯಲಿದೆ. ಇದರಲ್ಲಿ ರಾಜಕೀಯ ನೇತೃತ್ವ, ಸಿನಿಮಾ ಹಾಗೂ ಸಾಮಾಜಿಕ ವಲಯದ ಹಿರಿಯರು ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರು

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿಎಲ್ ಸಂತೋಷ್ ಅವರಂತಹ ದಿಗ್ಗಜರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ವಧುವಿನ ಪರಿಚಯ

ಶಿವಶ್ರೀ ಸ್ಕಂದಪ್ರಸಾದ್ ಚೆನ್ನೈ ಮೂಲದ ಶಾಸ್ತ್ರೀಯ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ. ಇವರು ಬಯೋ-ಇಂಜಿನಿಯರಿಂಗ್ (B.Tech), ಭರತನಾಟ್ಯದಲ್ಲಿ ಎಂಎ, ಮತ್ತು ಸಂಸ್ಕೃತದಲ್ಲಿ ಎಂಎ ಪದವೀಧರೆ.

ಮದುವೆ ಸ್ಥಳದ ಬದಲಾವಣೆ

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಗ್ರಾಮದಲ್ಲಿ ಮದುವೆ ನಡೆಸಲು ಯೋಜಿಸಿದ್ದರೂ, ಸಂಬಂಧಿಕರ ಸಲಹೆಯ ಮೇರೆಗೆ ಬೆಂಗಳೂರಿನ ರೆಸಾರ್ಟ್‌ಗೆ ಬದಲಾಯಿಸಲಾಯಿತು.

Exit mobile version