ಯುಪಿಎಸ್‌ಸಿ 2024 ಫಲಿತಾಂಶ: ಕರ್ನಾಟಕದ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಯುಪಿಎಸ್‌ಸಿ 2024 ಫಲಿತಾಂಶ: 1000 ಕ್ಕಿಂತ ಹೆಚ್ಚುಅಭ್ಯರ್ಥಿಗಳು ಆಯ್ಕೆ 

Untitled design 2025 04 23t181754.491

ಕೇಂದ್ರ ಲೋಕ ಸೇವಾ ಆಯೋಗ (UPSC) 2024 ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಗಳನ್ನು ನಿನ್ನೆ ಪ್ರಕಟಿಸಿದೆ. ಈಬಾರಿ 1000 ಕ್ಕೂ ಹೆಚ್ಚು ಅಭ್ಯರ್ಥಿಗಳು ದೇಶದ ಅತ್ಯುನ್ನತ ಸಿವಿಲ್ ಸರ್ವೀಸಸ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಹಲವರು IAS, IPS, IFS ಸೇರಿದಂತೆ ವಿವಿಧ ಕೇಂದ್ರ ಸೇವೆಗಳ ಭಾಗವಾಗಲಿದ್ದಾರೆ.

ಈ ಸಾಧನೆಯ ಪೈಕಿ ಗಮನ ಸೆಳೆಯುತ್ತಿರುವುದು India4IAS ಸಂಸ್ಥೆ. ನಿವೃತ್ತ ಹಿರಿಯ ಅಧಿಕಾರಿಗಳಾದ ಡಾ. ಸಿ.ಎಸ್. ಕೇದಾರ್ ಐಎಎಸ್ ಮತ್ತು ಡಾ. ಜಿ.ಎನ್. ಶ್ರೀಕಂಠಯ್ಯ ಐಎಫ್ಎಸ್ ಅವರ ನೇತೃತ್ವದ ಈ ಸಂಸ್ಥೆಯು 20ಕ್ಕೂ ಹೆಚ್ಚು ರ‍್ಯಾಂಕ್‌ಗಳನ್ನಈ ವರ್ಷ ಪಡೆದಿದೆ. ವಿಶೇಷವೆಂದರೆ, ಕರ್ನಾಟಕದಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ 60% ವಿದ್ಯಾರ್ಥಿಗಳು India4IAS ನಿಂದ ಬಂದಿದ್ದಾರೆ.

ADVERTISEMENT
ADVERTISEMENT

ಹಾವೇರಿ ಜಿಲ್ಲೆಯ ಡಾ. ಸಚಿನ್‌ ಬಿ. ಗುತ್ತೂರು ಅವರು ಅಖಿಲಭಾರತ 41ನೇ ರ‍್ಯಾಂಕ್‌ ಗಳಿಸಿ India4IAS ನ ಮೊದಲಿಗರಾಗಿದ್ದಾರೆ. ಕರ್ನಾಟಕದ ಡಾ. ರಂಗಮಂಜು (AIR 24) ಅವರು ಕೂಡಾ ಕರ್ನಾಟಕಕ್ಕೆ ಮೊದಲಿಗರಾಗಿ ಸಾಧನೆ ಮಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ India4IAS ಗಣನೀಯ ಸಾಧನೆ ಮಾಡುತ್ತಾ UPSC ಗೆ ತಯಾರಿ ಮಾಡುವ ಯುವಕರಿಗೆ ವಿಶ್ವಾಸದ ಕೇಂದ್ರವಾಗಿ ರೂಪಗೊಂಡಿದೆ. ದೆಹಲಿ, ಹೈದರಾಬಾದ್ ನಂತಹ ಶಿಕ್ಷಣಕೇಂದ್ರಗಳಿಂದ ಬಂದ ನಿಪುಣ ಅಧ್ಯಾಪಕರಿಂದ ಬೋಧನೆ, ಆಧುನಿಕ ಹಾಗೂ ಸೂಕ್ತವಾದ ಶೈಕ್ಷಣಿಕ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಸಂಸ್ಥೆಇದಾಗಿದೆ.

ಈ ಸಾಧನೆಯ ಮೂಲಕ ಕರ್ನಾಟಕವು ಕೇಂದ್ರ ನಾಗರೀಕ ಸೇವೆಗಳಿಗೆ ಹೆಚ್ಚು ಹೆಚ್ಚು ಅಧಿಕಾರಿಗಳನ್ನು ನೀಡುತ್ತಿರುವ ರಾಜ್ಯಗಳಲ್ಲಿ ಒಂದಾಗಿ ಬೆಳೆದಿದೆ. ಈ ವರ್ಷವೂ ದಿಟ್ಟತೆ, ಶಿಸ್ತು ಮತ್ತು ಸ್ಪಷ್ಟ ಗುರಿಯೊಂದಿಗೆ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು ಸಾಧನೆ ಮಾಡಿದ್ದು, India4IAS ಮಾದರಿಯ ತರಬೇತಿ ಸಂಸ್ಥೆಗಳ ಪಾತ್ರವನ್ನು ಮತ್ತಷ್ಟು ದೃಢಪಡಿಸುತ್ತದೆ.

ಇಂಡಿಯಾ ಫಾರ್ ಐಎಎಸ್ ಸಂಸ್ಥೆ ಯವತಿಯಿಂದ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾಪರೀಕ್ಷೆ 2024–25ರಲ್ಲಿಯಶಸ್ಸು ಪಡೆದ ಕರ್ನಾಟಕದ ಅಭ್ಯರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನುಆಯೋಜಿಸಲಾಗುತ್ತಿದೆ.

ಈ ಸಮಾರಂಭದಲ್ಲಿ ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್, ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆಂದು ಹೆಮ್ಮೆಯಿಂದ ತಿಳಿಸುತ್ತೇವೆ. ಜೊತೆಗೆ, ಹಲವು ಹಿರಿಯ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.

Exit mobile version