ಕನ್ನಡ ‘ಬಿಗ್ ಬಾಸ್’ ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಾಗಿದ್ದು, ಇದಾದ ಬಳಿಕ ಆಟ ಮತ್ತಷ್ಟು ರೋಚಕವಾಗಿದೆ. ಆಟದ ವೇಳೆ ಗೋಲ್ಡ್ ಸುರೇಶ್ ಗೆ ಅವಾಚ್ಯ ಪದ ಬಳಸಿದ್ದ ರಜತ್ ಕಿಶನ್ಗೆ ಸುದೀಪ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸುದೀಪ್ ಅವರು ರಜತ್ಗೆ ಕನ್ನಡದಲ್ಲಿ ತುಂಬಾ ಪದಗಳಿವೆ. ನಿಮ್ಮೆಲ್ಲರಿಗೂ ತೂಕಗಳಿವೆ ಎಂದ ಸುದೀಪ್ ಮಾತಿಗೆ ಸುರೇಶ್ ಅವರು ಎದೆಗೆ ಕೊಟ್ರೋ ಅದನ್ನು ನನಗೆ ತಡೆದುಕೊಳ್ಳಲು ಆಗಲಿಲ್ಲ. ಆ ಪದಗಳೆಲ್ಲವೂ ಮಾತಿನ ಭರದಲ್ಲಿ ಬಂತು ಎಂದು ರಜತ್ ಸಮಜಾಯಿಸಿ ಕೊಡುತ್ತಾರೆ. ನನಗೆ ಕೋಪ ಬಂದಾಗ ಇಂತಹದ್ದೇ ಬಾಯಲ್ಲಿ ಬರೋದು ಅಂತೀರಾ. ಇದೀಗ ಆ ಮಾತುಗಳನ್ನೆಲ್ಲ ನನ್ನ ಮುಂದೆ ವಾಪಸ್ ರಿಪೀಟ್ ಮಾಡಿ. ಯಾಕೆ ಅದನ್ನ ಈಗ ಹೇಳಲು ಆಗುತ್ತಿಲ್ಲ ಎಂದು ಸುದೀಪ್ ಖಡಕ್ ಆಗಿ ಪ್ರಶ್ನೆ ಮಾಡಿದರು.
ಆಗ ರಜತ್ ಅವರು ಇನ್ನೊಂದು ಸಲ ಆ ತಪ್ಪನ್ನು ರಿಪೀಟ್ ಮಾಡಲ್ಲ ಎಂದಿದ್ದಾರೆ. ಆಗ ಸುದೀಪ್ ಅವರು ನಗುತ್ತಾ. ಮುಂದೆ ತಪ್ಪು ಆದರೆ ಮನೆಯಲ್ಲಿ ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ ಎಂದು ಹೇಳಿದ್ದಾರೆ. ಈ ಮೂಲಕ ಕಡೆಯದಾಗಿ ರಜತ್ ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ.