ಮ್ಯಾಕ್ಸ್ ಚಿತ್ರದ ಬಿಗ್ ಅನೌನ್ಸ್ಮೆಂಟ್ ಆಗಿದೆ. ಪೋಸ್ಟರ್ನಲ್ಲಿ ಕಿಚ್ಚಸುದೀಪ್ ಇದ್ದಾರೆ. ಆದರೆ, ಮುಖ ಏನೂ ಕಾಣಿಸೋದಿಲ್ಲ. ಕೇವಲ ಕೈ ಕಾಣಿಸುತ್ತದೆ. ಬಲಗೈಯಲ್ಲಿ ಗನ್ ಇದೆ. ಹಾಗೆ ಬಿಗ್ ಅನೌನ್ಸ್ಮೆಂಟ್ ಕೂಡ ಮಾಡಿದೆ ಈ ಮೂಲಕ ಇದೀಗ ಮ್ಯಾಕ್ಸ್ ಚಿತ್ರದ ಬಗ್ಗೆ ಒಂದು ಹೊಸ ಕುತೂಹಲ ಹೆಚ್ಚಾಗಿದೆ.
ಮ್ಯಾಕ್ಸ್ ಸಿನಿಮಾಗೆ ಯುಎ ಸರ್ಟಿಫಿಕೇಟ್ ಸಿಕ್ಕಿದೆ. ಮಾತ್ರವಲ್ಲ ಕನ್ನಡದಲ್ಲಿ ಡಿಸೆಂಬರ್ 25ರಂದು ರಿಲಿಸ್ ಆಗುತ್ತಿದೆ. ಇನ್ನು ಡಿಸೆಂಬರ್ 27ರಂದು ತಮಿಳು, ತೆಲುಗುದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಮ್ಯಾಕ್ಸ್ ಸಿನಿಮಾದ ಚಿತ್ರಕಥೆ ಅದ್ಭುತವಾಗಿಯೆ ಬಂದಿದೆ. ಡೈರೆಕ್ಟರ್ ವಿಜಯ್ ಕಾರ್ತಿಕೇಯ ಇದನ್ನ ತುಂಬಾನೆ ಚೆನ್ನಾಗಿಯೇ ಮಾಡಿದ್ದಾರೆ. ಮ್ಯಾಕ್ಸ್ ಸಿನಿಮಾದಲ್ಲಿ ಕಿಚ್ಚನ ಖದರ್ ಬೇರೆ ಇದೆ. ಈ ಹಿಂದಿನ ಚಿತ್ರಗಳಲ್ಲಿ ಕಿಚ್ಚ ಸುದೀಪ್ ಕಾಣದ ರೀತಿಯಲ್ಲಿಯೇ ಇಲ್ಲಿ ಖಡಕ್ ಆಗಿಯೇ ಕಾಣಿಸಿಕೊಂಡಿದ್ದಾರೆ.
‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಸುದೀಪ್ ಸಿನಿಮಾ ‘ಮ್ಯಾಕ್ಸ್’ ರಿಲೀಸ್ಗೆ ರೆಡಿಯಾಗುತ್ತಿದೆ. ಕನ್ನಡದ ಎರಡು ಸಿನಿಮಾಗಳು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಕಿಚ್ಚ ಸುದೀಪ್ ‘ಮ್ಯಾಕ್ಸ್’ ಹಾಗೂ ಉಪೇಂದ್ರ ‘ಯುಐ’ ಎರಡೂ ಸಿನಿಮಾ ಕೇವಲ ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ.
ಇನ್ನು ಈ ಕ್ರಿಸ್ಮಸ್ಗೆ ಮ್ಯಾಕ್ಸ್ ಸಿನಿಮಾ ಧೂಳೆಬ್ಬಿಸಲು ಬರುತ್ತಿದ್ದು, ತಮಿಳು ಚಿತ್ರರಂಗದ ನಿರ್ಮಾಪಕ ಕಲೈಪುಲಿ ಎಸ್ ಧಾನು ಅವರು ಮ್ಯಾಕ್ಸ್ ಸಿನಿಮಾ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ವಿಲನ್ ಪಾತ್ರಗಳ ಮೂಲಕ ಖ್ಯಾತಿ ಗಳಿಸಿರುವ ಉಗ್ರಂ ಮಂಜು ಅವರು ಮ್ಯಾಕ್ಸ್ ಸಿನಿಮಾದಲ್ಲೂ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.