ಕುಲ್ದೀಪ್ ಯಾದವ್, ಭಾರತದ ಮಿಸ್ಟ್ರಿ ಸ್ಪಿನ್ನರ್. ಸದ್ಯ ಭಾರತ ತಂಡದ ಖಾಯಂ ಆಟಗಾರ. ಒನ್ ಡೇ ವರ್ಲ್ಡ್ಕಪ್ ಆಡಿದ್ದ ಕುಲ್ದೀಪ್, ಆ ಬಳಿಕ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಆಡಿದ್ದರು. ಸದ್ಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕುಲ್ದೀಪ್ ಗೆ, ಇಂಜುರಿಯಾಗಿ ಕ್ಯಾಪಿಟಲ್ಸ್ ತಂಡದಿಂದ ಹೊರಗುಳಿದಿದ್ದಾರೆ. ಲೆಗ್ ಸ್ಪಿನ್ನರ್ ಕುಲ್ದೀಪ್ ಯಾದವ್, ತೊಡೆಸಂಧು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಹೀಗಾಗಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಇದೇ ಕಾರಣದಿಂದಾಗಿ ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು, ಮೊದಲಾರ್ಧದ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.ಅಕಸ್ಮಾತ್ ಅವರು ಇಂಜುರಿಯಿಂದ ಪೂರ್ತಿ ಐಪಿಎಲ್ನಿಂದ ಹೊರಗುಳಿದ್ರೆ, ಆಗ ಟಿ20 ವಿಶ್ವಕಪ್ ಆಡೋ ಕನಸು ಸಹ ಭಗ್ನಗೊಳ್ಳಲಿದೆ. ಐಪಿಎಲ್ ಪರ್ಫಾಮೆನ್ಸ್ ನೋಡಿ ಟಿ20 ವರ್ಲ್ಡ್ಕಪ್ಗೆ ಟೀಂ ಇಂಡಿಯಾವನ್ನ ಸೆಲೆಕ್ಟ್ ಮಾಡಲಾಗುತ್ತೆ. ಒಂದು ಕಡೆ ಮ್ಯಾಚ್ ಆಡಲ್ಲ. ಮತ್ತೊಂದು ಕಡೆ ಇಂಜುರಿ. ಈ ಎರಡು ಕುಲ್ದೀಪ್ಗೆ ಮಾರಕವಾಗಲಿವೆ. ಒಟ್ನಲ್ಲಿ ಕುಲ್ದೀಪ್ ಇಂಜುರಿ ಕೇವಲ ಡೆಲ್ಲಿಗೆ ಮಾತ್ರವಲ್ಲ. ಟೀಂ ಇಂಡಿಯಾಗೂ ದೊಡ್ಡ ಹಿನ್ನಡೆಯಾಗೋದು ನಿಶ್ಚಿತ.