ನಾಳೆ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯಲಿದೆ. ನಾಳಿನ ಮತದಾನಕ್ಕಾಗಿ ರಾಜ್ಯದಲ್ಲಿ ಎಲ್ಲಾ ಸಿದ್ಧತೆಗಳನ್ನ ನಡೆಸಲಾಗುತ್ತಿದೆ. ಇಂದು ಮಸ್ಟರಿಂಗ್ ಕಾರ್ಯಕ್ಕೆ ಸಿದ್ಧತೆ ಆರಂಭಗೊಂಡಿದೆ. ಮತದಾನಕ್ಕೂ ಮುನ್ನ ನಡೆಯುವ ಸಿದ್ಧತೆಯೇ ಮಸ್ಟರಿಂಗ್ ಎಂದು ಕರೆಯುತ್ತಾರೆ. ಈಗಾಗಲೇ ಸಿಬ್ಬಂದಿಗೆ ಕೊನೆಯ ಹಂತದ ಟ್ರೈನಿಂಗ್ ನೀಡಲಾಗುತ್ತಿದೆ.
ಒಂದು ಮತಗಟ್ಟೆಗೆ ಒಂದು ಇವಿಎಂ ಒಂದು ವಿವಿಪ್ಯಾಟ್ ವಿತರಣೆ ಮಾಡಲಾಗುತ್ತಿದೆ. ಶಾಹಿ, ವೋಟರ್ ಲಿಸ್ಟ್, ಇವಿಎಂ , ವಿವಿಪ್ಯಾಟ್, ಲೇಖನಾ ಸಾಮಾಗ್ರಿ ಜೊತೆಗೆ ಸಿಬ್ಬಂದಿ ಮತಗಟ್ಟೆಗೆ ತೆರಳಲಿದ್ದಾರೆ. ನಾಳೆ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ವಲಯದ ಉದ್ಯಮಗಳಿಗೆ ವೇತನ ಸಹಿತ ಸಾರ್ವತ್ರಿಕ ರಜೆ ನೀಡಲಾಗಿದೆ. ನಾಳೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಬೆಂಗಳೂರಿನ 3 ಲೋಕಸಭಾ ಕ್ಷೇತ್ರದ ಮತದಾನ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತಗಟ್ಟೆಗಳ ಸುತ್ತಲೂ ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ. ಜಿಲ್ಲಾ ಚುನಾವಣಾ ಆಯೋಗದಿಂದ ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಪಿ.ಆರ್.ಓ ಹಾಗೂ ಎ.ಪಿ.ಆರ್.ಓ ಮತ್ತು ಮೂವರು ಪಿ.ಓ ಸೇರಿ 5 ಜನ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಮತ ಕೇಂದ್ರಗಳ 200 ಮೀಟರ್ ಸುತ್ತ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಗಿದೆ.
ಬೆಂಗಳೂರು ಬಿಗಿಭದ್ರತೆ
ನಗರ ಪೊಲೀಸ್ ಕಮಿಷನರ್ –1
ಹೆಚ್ಚುವರಿ ಪೊಲೀಸ್ ಆಯುಕ್ತರು – 3
ಜಂಟಿ ಪೊಲೀಸ್ ಆಯುಕ್ತರು-1
ಡಿಸಿಪಿ – 24
ಎಸಿಪಿ – 52
ಇನ್ಸ್ ಪೆಕ್ಟರ್ – 118
ಪಿಎಸ್ ಐ/ ಎಎಸ್ ಐ – 687
ಹೆಡ್ ಕಾನ್ಸ್ ಟೇಬಲ್/ ಪಿಸಿ – 8511
ಹೋಂ ಗಾರ್ಡ್- 3919
ಕೇಂದ್ರೀಯ ಪೊಲೀಸ್ ಪಡೆ – 11
ಕೆಎಸ್ ಆರ್ ಪಿ/ ಸಿಎಆರ್ – 54 ತುಕಡಿಗಳು
ಸೂಕ್ಷ್ಮ ಮತ್ತು ಅತಿ ಸೂಕ್ಮ ಮತಗಟ್ಟೆಯಲ್ಲಿ 11,793 ಸಿಎಪಿಎಫ್, ನಾನ್ ಸಿಎಪಿಎಫ್ ತಂಡಗಳ ನಿಯೋಜನೆ ಮಾಡಲಾಗಿದೆ.
ಪ್ರತಿ ಕ್ಷೇತ್ರದಲೂ ಒಂದು ಪಿಂಕ್ ಬೂತ್ & ಒಂದು ಯುವ್ ಬೂತ್
60 ವರ್ಷ ಮೇಲ್ಪಟ್ಟ ವೃದ್ಧರಿಗೆ, ಅಂಗವಿಕಲರಿಗೆ ಉಚಿತ ಕ್ಯಾಬ್
ಐಟಿಬಿಟಿ ಮತದಾರರಿಗೆ app ಮೂಲಕ ನೋಂದಣಿ
ಮತ ಕೇಂದ್ರದ ಬಳಿ ಕಾರ್ ಪಾರ್ಕಿಂಗ್ ವ್ಯವಸ್ಥೆ
appನಲ್ಲಿ ರಿಜಿಸ್ಟರ್ ಮಾಡಿಕೊಂಡವರಿಗೆ ನೇರ ಅವಕಾಶ
ಮತಗಟ್ಟೆ 200 ಮೀಟರ್ ಒಳಗೆ ಪಕ್ಷದ ಚಿಹ್ನೆ ಬಳಕೆಗೆ ನಿಷೇಧ
ಮತಗಟ್ಟೆಯಲ್ಲಿ ಅಭ್ಯರ್ಥಿ ಪರ ಒಬ್ಬ ಏಜೆಂಟ್ ಗೆ ಅವಕಾಶ
ಬಿಬಿಎಂಪಿ ವ್ಯಾಪ್ತಿಯಲ್ಲಿ 8984 ಮತಗಟ್ಟಿಗಳು ಇವೆ
2003 ಮತಗಟ್ಟಿಗಳು ಸೂಕ್ಷ್ಮ
253 ಅತಿಸೂಕ್ಷ್ಮ ಮತಗಟ್ಟಿಗಳು
ಒಟ್ಟು 305 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಕ
ಚುನಾವಣೆಗೆ ಕಾರ್ಯಕ್ಕೆ 52 ಸಾವಿರ ಸಿಬ್ಬಂದಿ ನೇಮಕ
ಒಟ್ಟು 305 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ
ಬೆಂಗಳೂರಿನ 3 ಕ್ಷೇತ್ರಗಳ ವಿವರ
ಮಹಿಳ ಮತದಾರರು – 4.909.958
ವಿಶೇಷ ಚೇತನರ ಸಂಖ್ಯೆ – 31173
ಪುರುಷ ಮತದಾರರು – 5.216.091
ಒಟ್ಟು ಯುವ ಮತದಾರರ ಸಂಖ್ಯೆ – 160232
ಸೇವಾ ಮತದಾರರು – 1665
ಎನ್ ಆರ್ ಐ ಮತದಾರರು ಸಂಖ್ಯೆ- 2158
ಒಟ್ಟು ಮತದಾರರ ಸಂಖ್ಯೆ – 10,127,869
ಚುನಾವಣೆಗೆ ಬಿಗಿ ಭದ್ರತೆ ವಹಿಸಲಾಗಿದ್ದು, ಈಗಾಗಲೇ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟಿಗಳ ಪಟ್ಟಿ ಮಾಡಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ನಾಳೆ ಸಂಜೆ 6 ಗಂಟೆಯಿಂದ ಏಪ್ರಿಲ್ 26 ರ ಮಧ್ಯರಾತ್ರಿ 12 ಗಂಟೆಯವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧ ಹೇರಲಾಗಿದೆ. ನಗರದ ಎಲ್ಲಾ ಕಡೆ ಇರೋ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ನಡೆಸಲಾಗುತ್ತೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಒಟ್ಟಾರೆ ಸುಗಮ ಮತ್ತು ಸುರಕ್ಷಿತ ಮತದಾನಕ್ಕೆ ಆಯೋಗ ಮತ್ತು ಪೊಲೀಸರು ಎಲ್ಲಾ ಸಿದ್ಧತೆ ನಡೆಸಿದ್ದು, ನಾವೆಲ್ಲರೂ ತಪ್ಪದೇ ಮತದಾನ ಮಾಡೋಣ.