ಬೆಂಗಳೂರು ಪೊಲೀಸರಿಗಷ್ಟೇ ಅಲ್ಲ, ರಾಜ್ಯದಲ್ಲಿನ ಹಲವು ಉಗ್ರ ಚಟುವಟಿಕೆಗಳಲ್ಲಿ ಪೊಲೀಸರು, ಎನ್ಐಎ ಹಾಗೂ ಸಿಬಿಐಗೆ ಬೇಕಾಗಿದ್ದ ಉಗ್ರ ಸಲ್ಮಾನ್ ರೆಹಮಾನ್ ರವಾಂಡದಲ್ಲಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನಲ್ಲಿ ನಡೆದ ಹಾಗೂ ನಡೆಯಬೇಕಿದ್ದ ಹಲವು ಉಗ್ರ ಕೃತ್ಯಗಳಿಗೆ ನೆರವು ನೀಡುತ್ತಿದ್ದ ಉಗ್ರನನ್ನು ರವಾಂಡದಲ್ಲಿ ಬಂಧಿಸಲಾಗಿದ್ದು, ಆರೋಪಿಯನ್ನು ಈಗ ಬಾರತಕ್ಕೆ ಹಸ್ತಾಂತರ ಮಾಡಲಾಗಿದೆ.
ಆರೋಪಿ ರೆಹಮಾನ್ ಬಂಧನಕ್ಕೆ ಎನ್ಐಎ ಮತ್ತು ಸಿಬಿಐ ಜಂಟಿ ಕಾರ್ಯಾಚರಣೆ ನಡೆಸಿತ್ತು. ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ರವಾಂಡಾದಲ್ಲಿ ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ಬಾ ಉಗ್ರನ ಹಸ್ತಾಂತರವಾಗಿದ್ದಾನೆ. ಲಷ್ಕರ್ ಸೇರಿದ್ದ ಬೆಂಗಳೂರಿನ ಉಗ್ರ ಸಲ್ಮಾನ್ ರೆಹಮಾನ್ ಖಾನ್ ಹಸ್ತಾಂತರ ಮಾಡಲಾಗಿದೆ.
ಸಲ್ಮಾನ್ ರೆಹಮಾನ್ ಬೆಂಗಳೂರಿನವನೇ. ಬೆಂಗಳೂರಿನಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಶಸ್ತ್ರಾಸ್ತ್ರ ಸರಬರಾಜು ಆರೋಪ ಈತನ ಮೇಲಿದೆ. ಈತ ಹಿಂದೊಮ್ಮೆ ಪ್ರಕರಣವೊಂದರಲ್ಲಿ ಅರೆಸ್ಟ್ ಆಗಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಅಲ್ಲಿದ್ಧಾಗ ಉಗ್ರರ ಜಾಲಕ್ಕೆ ಬಂದಿದ್ದ. 2018-2022ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೆಹಮಾನ್, ಆಗ ಅದೇ ಜೈಲಿನಲ್ಲಿದ್ದ
ಟಿ ನಾಸಿರ್ ಎಂಬ ಉಗ್ರನಿಂದ ಭಯೋತ್ಪಾದನಾ ಜಾಲಕ್ಕೆ ಧುಮುಕಿದ್ದ.ಜೈಲು ಸೇರಿದ್ದವನು ಉಗ್ರರ ಜಾಲಕ್ಕೆ ಸಿಕ್ಕಿದ್ದ. ಲಷ್ಕರ್ ಇ ತೊಯ್ಬಾ ಸಂಘಟನೆ ಸೇರಿದ್ದವನು ಕೊನೆಗೂ ರವಾಂಡದಲ್ಲಿ ಸಿಕ್ಕಿಬಿದ್ದಿದ್ದಿದ್ದಾನೆ. ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳಿಗೆ ಹಣ, ಶಸ್ತ್ರಾಸ್ತ್ರ ಸರಬರಾಜು ಸ್ಕೆಚ್ ಹಾಕಿದ್ದ ಸಲ್ಮಾನ್ ರೆಹಮಾನ್ನ್ನು ರವಾಂಡಾ ಪೊಲೀಸರು ಸಿಬಿಐ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಆರೋಪಿ ರೆಹಮಾನ್ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಈತನ ವಿರುದ್ಧದ ಇನ್ನಷ್ಟು ಪ್ರಕರಣ, ತನಿಖೆಯು ಹೊರಬಿದ್ದರೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.