ಲೋಕಸಭೆ ಚುನಾವಣೆಯ ಕಾವು ಜೋರಾಗಿದ್ದು, ರಾಜ್ಯದಲ್ಲಿ ಶುಕ್ರವಾರ 26 ರಂದು ಮೊದಲನೇ ಹಂತದ ಮತದಾನ ನಡೆಯಲಿದೆ. ದೇಶಾದ್ಯಂತ 13 ರಾಜ್ಯಗಳ 89 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಇಂದು ದೇಶದ ಮತದಾರರು 1200ಕ್ಕೂ ಹೆಚ್ಚು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ಜನತೆಗೆ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಅಲ್ಲದೇ ದೇಶದ ಯುವ ಮತದಾರರು ಹಾಗೂ ದೇಶದ ಮಹಿಳಾ ಶಕ್ತಿ ಉತ್ಸಾಹದಿಂದ ಮತದಾನ ಮಾಡುವಂತೆ ಪ್ರಧಾನಿ ಮೋದಿ ಅವರು ಮನವಿ ಮಾಡಿದರು. ಅಸ್ಸಾಂ, ಬೆಂಗಾಲಿ, ಮಲಯಾಳಂ, ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ಏಳೂ ಭಾಷೆಗಳಲ್ಲಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.