ದೆಹಲಿ : 18ನೇ ಲೋಕಸಭಾ ಚುನಾವಣೆ (Lok Sabha Election) ಏಪ್ರಿಲ್ 19 ಶುಕ್ರವಾರದಿಂದ ಆರಂಭವಾಗಿದೆ. ಮೊದಲ ಹಂತದ ಮತದಾನ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿಂದತೆ 102 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯುತ್ತಿದೆ. ಲೋಕಸಭೆ ಚುನಾವಣೆ 2024 ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಮೊದಲ ಏಪ್ರಿಲ್ 19, ಎರಡನೇ ಏಪ್ರಿಲ್ 26, ಮೂರನೇ ಮೇ 7, ನಾಲ್ಕನೇ ಮೇ 13, ಐದನೇ ಮೇ 20, ಆರನೇ ಮೇ 25 ಮತ್ತು ಏಳನೇ ಹಂತದ ಮತದಾನ ಜೂನ್ 1 ರಂದು ನಡೆಯಲಿದ್ದು, ಮತ ಎಣಿಕೆ ಜೂನ್ 4 ರಂದು ನಡೆಯಲಿದೆ.
ಲೋಕಸಭೆ ಚುನಾವಣೆ : ಮೊದಲ ಹಂತದ ರಾಜ್ಯವಾರು ವೇಳಾಪಟ್ಟಿ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು – ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಅರುಣಾಚಲ ಪ್ರದೇಶ – ಅರುಣಾಚಲ ಪ್ರದೇಶ ಪೂರ್ವ, ಅರುಣಾಚಲ ಪ್ರದೇಶ ಪಶ್ಚಿಮ
ಅಸ್ಸಾಂ – ದಿಬ್ರುಗಢ್, ಜೋರ್ಹತ್, ಕಾಜಿರಂಗ, ಲಖಿಂಪುರ, ಸೋನಿತ್ಪುರ್
ಬಿಹಾರ – ಔರಂಗಾಬಾದ್, ಗಯಾ, ಜಮುಯಿ, ನಾವಡಾ
ಜಮ್ಮು ಮತ್ತು ಕಾಶ್ಮೀರ – ಉಧಂಪುರ
ಛತ್ತೀಸ್ಗಢ – ಬಸ್ತಾರ್
ಲಕ್ಷದ್ವೀಪ – ಲಕ್ಷದ್ವೀಪ
ಮಧ್ಯಪ್ರದೇಶ – ಛಿಂದ್ವಾರಾ, ಬಾಲಾಘಾಟ್, ಜಬಲ್ಪುರ್, ಮಂಡ್ಲಾ, ಸಿಧಿ, ಶಹದೋಲ್
ಮಹಾರಾಷ್ಟ್ರ – ಚಂದ್ರಾಪುರ, ಭಂಡಾರಾ – ಗೊಂಡಿಯಾ, ಗಡ್ಚಿರೋಲಿ – ಚಿಮೂರ್, ರಾಮ್ಟೆಕ್, ನಾಗ್ಪುರ
ಮಣಿಪುರ – ಒಳ ಮಣಿಪುರ, ಹೊರ ಮಣಿಪುರ
ರಾಜಸ್ಥಾನ – ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್ಪುರ, ಕರೌಲಿ-ಧೋಲ್ಪುರ್, ದೌಸಾ, ನಾಗೌರ್
ಮೇಘಾಲಯ – ಶಿಲ್ಲಾಂಗ್, ತುರಾ
ಮಿಜೋರಾಂ – ಮಿಜೋರಾಂ
ನಾಗಾಲ್ಯಾಂಡ್ – ನಾಗಾಲ್ಯಾಂಡ್
ಪುದುಚೇರಿ – ಪುದುಚೇರಿ
ಸಿಕ್ಕಿಂ – ಸಿಕ್ಕಿಂ
ತಮಿಳುನಾಡು – ತಿರುವಳ್ಳೂರು, ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಶ್ರೀಪೆರಂಬದೂರ್, ಕಾಂಚೀಪುರಂ, ಅರಕ್ಕೋಣಂ, ವೆಲ್ಲೂರು, ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ಅರಣಿ, ವಿಲುಪ್ಪುರಂ, ಕಲ್ಲಕುರಿಚಿ, ಸೇಲಂ, ನಾಮಕ್ಕಲ್, ಈರೋಡ್, ತಿರುಪ್ಪೂರ್, ನೀಲಗಿರಿ, ಕೊಯಮತ್ತೂರು, ಪೊಲ್ಲಾಚಿ, ದಿಂಡಿಗಲ್ ಕರೂರ್, ತಿರುಚಿರಾಪಳ್ಳಿ, ಪೆರಂಬಲೂರು, ಕಡಲೂರು, ಚಿದಂಬರಂ, ಮೈಲಾಡುತುರೈ, ನಾಗಪಟ್ಟಿಣಂ, ತಂಜಾವೂರು, ಶಿವಗಂಗಾ, ಮಧುರೈ, ಥೇಣಿ, ವಿರುಧುನಗರ, ರಾಮನಾಥಪುರಂ, ತೂತುಕ್ಕುಡಿ, ತೆಂಕಶಿ, ತಿರುನೆಲ್ವೇಲಿ, ಕನ್ಯಾಕುಮಾರಿ
ತ್ರಿಪುರ – ತ್ರಿಪುರ ಪಶ್ಚಿಮ
ಉತ್ತರಾಖಂಡ – ತೆಹ್ರಿ ಗರ್ವಾಲ್, ಗರ್ವಾಲ್, ಅಲ್ಮೋರಾ, ನೈನಿತಾಲ್- ಉಧಮ್ಸಿಂಗ್ ನಗರ, ಹರಿದ್ವಾರ
ಪಶ್ಚಿಮ ಬಂಗಾಳ – ಕೂಚ್ಬೆಹಾರ್, ಅಲಿಪುರ್ದವಾರ್ಸ್, ಜಲ್ಪೈಗುರಿ
ಉತ್ತರ ಪ್ರದೇಶ – ಸಹರಾನ್ಪುರ, ಕೈರಾನಾ, ಮುಜಫರ್ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್, ಪಿಲಿಭಿತ್