ಲೋಕಸಭೆ ಚುನಾವಣೆಯ ಕಾವು ರಾಜ್ಯದಲೂ ಜೋರಾಗಿದೆ. ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಪೈಪೋಟಿಗೆ ಬಿದ್ದಿವೆ. ಒಂದು ಕಡೆ ಬಿಜೆಪಿಗೆ ಮೋದಿ ನಾಮಬಲ, ಇತ್ತ ಕಾಂಗ್ರೆಸ್ಗೆ ಗ್ಯಾರಂಟಿ ಜಂಘಾಬಲ. ಮೈತ್ರಿ ವಿಶ್ವಾಸದಲ್ಲಿ ಬಿಜೆಪಿ, ಜೆಡಿಎಸ್ ಮುನ್ನುಗಿದ್ದರೆ, ಕಾಂಗ್ರೆಸ್ ಏಕಾಂಗಿಯೇ ಅಖಾಡಕ್ಕೆ ಇಳಿದಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆಗೆ ಮತದಾನ ನಡೆಯಲಿದೆ. ಈಗಾಗಲೇ ಮೊದಲ ಹಂತದ ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮೊದಲ ಹಂತದ ಒಟ್ಟು 14 ಕ್ಷೇತ್ರಗಳ ಪೈಕಿ 247 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ತಮ್ಮ ಉಮೇದುವಾರಿಕೆ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. 53 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.
ಕ್ಷೇತ್ರಾವಾರು ಅಭ್ಯರ್ಥಿಗಳ ಲೆಕ್ಕ ನೋಡೋದಾದ್ರೆ ಬೆಂಗಳೂರು ಉತ್ತರ – 21, ಹಾಸನ – 15, ಚಿತ್ರದುರ್ಗ- 20, ತುಮಕೂರು – 18, ಮಂಡ್ಯ – 14, ಬೆಂಗಳೂರು ಕೇಂದ್ರ – 24, ಬೆಂಗಳೂರು ದಕ್ಷಿಣ – 22, ಚಿಕ್ಕಬಳ್ಳಾಪುರ – 29, ಮೈಸೂರು – 18, ದಕ್ಷಿಣ ಕನ್ನಡ – 9, ಚಾಮರಾಜನಗರ – 14, ಕೋಲಾರ -18, ಬೆಂಗಳೂರು ಗ್ರಾಮೀಣ – 15, ಉಡುಪಿ-ಚಿಕ್ಕಮಗಳೂರು – 10