ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿವೆ. ಅದರಲ್ಲೂ ಪ್ರಚಾರದಲ್ಲಿ ಆಗಲಿ ಅಥವಾ ಸಾಮಾಜಿಕ ಜಾಲತಾಣಗಳ ಬಳಕೆಯಾಗಲಿ, ನರೇಂದ್ರ ಮೋದಿ ಬೇರೆ ರಾಜಕಾರಣಿಗಳಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಈಗ ಕನ್ನಡಿಗರನ್ನ ತಲುಪಲು ಮತ್ತೊಂದು ಪ್ಲಾನ್ ಮಾಡಿಕೊಂಡಿರುವ ಮೋದಿ, ಸಾಮಾಜಿಕ ಮಾಧ್ಯಮ “ಎಕ್ಸ್” / ಟ್ವಿಟರ್ನಲ್ಲಿ ಕನ್ನಡ ಭಾಷೆಯಲ್ಲಿ ಪ್ರತ್ಯೇಕ ಅಕೌಂಟ್ ತೆಗೆದಿದ್ದಾರೆ. ಖಾತೆಯಲ್ಲಿ ‘ನಮೋ ಕನ್ನಡ’ ಎಂದು ಉಲ್ಲೇಖಿಸಲಾಗಿದೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಕನ್ನಡಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪಲು ಮೋದಿಯವರು ಕನ್ನಡದಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದಾರೆ.ಇನ್ನು ಈ ಖಾತೆಯಲ್ಲಿ ಮೋದಿ ಪ್ರವಾಸದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡಲಾಗುತ್ತೆ. ಅಲ್ಲದೇ ಮೋದಿ ಭಾಷಣವನ್ನ ಕನ್ನಡಕ್ಕೆ ಅನುವಾದಿಸಿರುವ ಮಾಹಿತಿಯನ್ನೂ ಒಳಗೊಂಡಿರಲಿದೆ.