ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿದೆ. ಹೈವೋಲ್ಟೇಜ್ ಅಖಾಡದಲ್ಲಿ ತಮ್ಮ ಗೆಲುವಿನ ಬಾವುಟ ಹಾರಿಸಲು ಬಿಜೆಪಿ-ಕಾಂಗ್ರೆಸ್ ಪೈಪೋಟಿಗೆ ಬಿದ್ದಿವೆ. ಹೇಳಿಕೇಳಿ ಬೆಂಗಳೂರು ಗ್ರಾಮಾಂತರ ಡಿಕೆ ಬ್ರದರ್ಸ್ ಭದ್ರಕೋಟೆ. ಈ ಭದ್ರಕೋಟೆಗೆ ನುಗ್ಗಿ ಬೇಟೆಯಾಡಲು ಮೋದಿ-ಶಾ ಜೋಡಿ ಮುಂದಾಗಿದೆ. ಮೊನ್ನೆಯಷ್ಟೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ.
ಅಮಿತ್ ಶಾ ಒಂದು ಸುತ್ತಿನ ಪ್ರಚಾರ ನಡೆಸಿ ಹೊರಟ ಬೆನ್ನಲೇ, ಈಗ ಮೋದಿ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಹೌದು ಇದೀಗ ಮಂಜುನಾಥ್ ಪರ ಪ್ರಧಾನಿ ನರೇಂದ್ರ ಮೋದಿ ಕೂಡ ಮತಯಾಚನೆ ನಡೆಸುವ ಸಾಧ್ಯತೆ ಇದೆ. ಏಪ್ರಿಲ್ 19 ಅಥವಾ 20ರಂದು ಪ್ರಧಾನಿ ನರೇಂದ್ರ ಮೋದಿ ರಾಮನಗರಕ್ಕೆ ಆಗಮಿಸಿ ಸಾಧ್ಯತೆ ಇದೆ. ರಾಮನಗರದಲ್ಲಿ ಬೃಹತ್ ಸಮಾವೇಶ ನಡೆಸಿ, ಮೈತ್ರಿ ಶಕ್ತಿ ಪ್ರರ್ದಶನಕ್ಕೆ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇದೇ ಸಮಾವೇಶದಲ್ಲಿ ಮೋದಿಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಜೊತೆಯಾಗಲಿದ್ದಾರಂತೆ. ಈ ಬಾರಿ ಡಿಕೆ ಬ್ರದರ್ಸ್ ಭದ್ರಕೋಟೆ ಛಿದ್ರ ಮಾಡಲು, ಬಿಜೆಪಿ ಜೊಡೇತ್ತಿಗೆ, ದೇವೇಗೌಡ ಆಂಡ್ ಫ್ಯಾಮಿಲಿ ಕೈಜೋಡಿಸುತ್ತಿರುವುದು ಎಷ್ಟರ ಮಟ್ಟಿಗೆ ಫಲ ಕೊಡಲಿದೆ ಕಾದು ನೋಡಬೇಕಿದೆ.