ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಸರಳತೆಗೆ ಹೆಸರಾದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೈಪಡೆಯಿಂದ ಬದ್ಧತೆಗೆ ಹೆಸರಾದ ಜಯಪ್ರಕಾಶ್ ಹೆಗಡೆ ಕಣಕ್ಕಿಳಿದಿದ್ದಾರೆ. ಮಾಜಿ ಶಾಸಕ ಕೋಟ ಶ್ರೀನಿವಾಸ್ ಪೂಜಾರಿ 3.5 ಕೋಟಿ ಒಡೆಯ. ನಾನು ಗಂಜಿ ಕುಡಿಯೋದು, ತುಂಬಾ ಸಿಂಪಲ್ ನಾನು ಎಂದು ಹೇಳಿಕೊಳ್ಳುತ್ತಿದ್ದ ಕೋಟ 3.5 ಕೋಟಿ ಒಡೆಯ. ಸದ್ಯ ಈ ಬಗ್ಗೆ ಕ್ಷೇತ್ರಾದ್ಯಂತ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪತ್ನಿ ಶಾಂತಾ ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತವರ ಕುಟುಂಬದ ಆಸ್ತಿ ವಿವರ ನೋಡುವುದಾದರೆ..
ಕೋಟ ಶ್ರೀನಿವಾಸ ಪೂಜಾರಿ ಕೈಯಲ್ಲಿ 90 ಸಾವಿರ ನಗದು
ಪತ್ನಿ ಬಳಿಯಲ್ಲಿ 20 ಸಾವಿರ ನಗದು ಇರುವ ಬಗ್ಗೆ ಉಲ್ಲೇಖ
ಕೋಟ ಶ್ರೀನಿವಾಸ ಪೂಜಾರಿ ಚರಾಸ್ತಿ ಮೌಲ್ಯ 31,95,082 ಲಕ್ಷ
ಹೆಂಡತಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ 10,29,027 ಲಕ್ಷ
ಮಕ್ಕಳ ಚರಾಸ್ತಿ ಮೌಲ್ಯ 21,96,407 ಲಕ್ಷ
ಕೋಟ ಶ್ರೀನಿವಾಸ ಪೂಜಾರಿ ಅವರ ಸ್ಥಿರಾಸ್ತಿ ವಿವರಗಳನ್ನು ನೊಡುವುದಾದರೆ..
ಕೋಟ ಶ್ರೀನಿವಾಸ ಪೂಜಾರಿ ಬಳಿ 79,95,082 ಲಕ್ಷ
ಪತ್ನಿ ಹೆಸರಲ್ಲಿ 1,62,79,027 ಕೋಟಿ
ಮಗಳು ಸ್ವಾತಿ ಬಳಿ 3,70,00 ಲಕ್ಷ
ಮಗ ಶಶಿಧರ್ ಬಳಿ 47,59,935 ಲಕ್ಷ
ಮಗಳು ಶೃತಿ ಬಳಿ ಇರುವ ಸ್ಥಿರಾಸ್ತಿ 66,466 ಲಕ್ಷ
ಕುಟುಂಬದ ಒಟ್ಟು ಸ್ಥಿರಾಸ್ತಿ ಮೌಲ್ಯ 2,94,70,510 ಕೋಟಿ
ಇವರ ಚರಾಸ್ತಿ ಹಾಗೂ ಚರಾಸ್ತಿಯ ಒಟ್ಟು ಮೌಲ್ಯ 3,58,91,020 ಕೋಟಿ
ಜಯಪ್ರಕಾಶ್ ಹೆಗಡೆ, ಉಡುಪಿ-ಚಿಕ್ಕಮಗಳೂರು, ಕಾಂಗ್ರೆಸ್ ಅಭ್ಯರ್ಥಿ
ಜಯಪ್ರಕಾಶ್ ಹೆಗ್ಡೆ ಬಳಿ ನಗದು- 85,000 ಸಾವಿರ
ಪತ್ನಿ ಶೋಭಾ ಜೆ. ಬಳಿ – 92,000 ಸಾವಿರ
ವಿವಿಧ ಬ್ಯಾಂಕ್ಗಳಲ್ಲಿ ಜಯಪ್ರಕಾಶ್ ಹೆಗ್ಡೆ – 31,02, 324, ಪತ್ನಿ ಶೋಭಾ ಹೆಸರಿನಲ್ಲಿ – 6,34,219 ಕೋಟಿ
ಸ್ಥಿರಾಸ್ತಿ ವಿವರ ನೋಡೋದಾದ್ರೆ
ಭೂಮಿ, ಕೃಷಿ ಭೂಮಿ ಮತ್ತು ಕಟ್ಟಡ ಸೇರಿ ಸದ್ಯದ ಮಾರುಕಟ್ಟೆ ದರದಲ್ಲಿ ಹೆಗ್ಡೆ ಬಳಿ 13,12,61, 587
ಕೋಟಿ
ಪತ್ನಿಶೋಭಾ ಹೆಸರಲ್ಲಿ 1,05,00,180 ಕೋಟಿ
ಜಯಪ್ರಕಾಶ್ ಹೆಗಡೆ ಸ 15,00,000 ಲಕ್ಷ ಸಾಲ ರೂಪಾಯಿಯನ್ನ
ಒಟ್ಟು ಮೌಲ್ಯ 16,66,50,504 ಕೋಟಿ