ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಗುಜರಾತ್ ನ ನಾಡಿಯಾಡ್ ಮತಗಟ್ಟೆ ಒಂದು ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಯಿತು. 20 ವರ್ಷಗಳ ಹಿಂದೆ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡ ಅಂಕಿತ್ ಸೋನಿ ಎಂಬವರು ಮತಗಟ್ಟೆಗೆ ಬಂದು ಕಾಲಿನ ಬೆರಳುಗಳ ಸಹಾಯದಿಂದ ಮತದಾನ ಮಾಡಿ ಮಾದರಿಯಾದರು.
ಅಂಕಿತ್ ಸೋನಿ 20 ವರ್ಷಗಳ ಹಿಂದೆ ವಿದ್ಯುತ್ ಶಾಕ್ ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ, ಇನ್ನು ಅಂಕಿತ್ ಸೋನಿ ಹಲವಾರು ವರ್ಷಗಳಿಂದ ತನ್ನ ಮತವನ್ನು ಚಲಾಯಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.