ದ್ವಾರಕೀಶ್ ನಿಧನ ನನಗೆ ಅತೀವ ನೋವನ್ನು ತಂದಿದೆ ಅಂತ ರಜನಿಕಾಂತ್ ಹೇಳಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸೂಪರ್ ಸ್ಟಾರ್ ರಜನಿಕಾಂತ್, ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀವ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ ದೊಡ್ಡ ನಿರ್ಮಾಪಕ, ನಿರ್ದೇಶಕನಾಗಿ ಬೆಳೆದು ಬಂದ ಸವಿನೆನಪುಗಳು ನೆನಪಿಗೆ ಬರುತ್ತಿವೆ. ಅವರಿಗೆ ನನ್ನ ಭಾವಪೂರ್ಣ ಸಂತಾಪ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.