ಲುಧಿಯಾನ: ಭಾರತ ದಕ್ಷಿಣ ರಾಜ್ಯಗಳಲ್ಲಿ ಕೆಲವೆಡೆ ಮಳೆ, ಕೆಲ ರಾಜ್ಯದಲ್ಲಿ ಮಳೆ ಮೋಡಗಳು ಗೋಚರಿಸಿದೆ. ಚೆನ್ನೈ ಸೇರಿದಂತೆ ತಮಿಳುುನಾಡಿನ ಕೆಲೆವೆಡೆ ಮಳೆಯಾಗುತ್ತಿದೆ. ಹೀಗಾಗಿ ಸೂರ್ಯ ಕಿರಣಗಳು ಪ್ರಕರವಾಗಿಲ್ಲ. ಆದರೆ ಪಂಜಾಬ್ನ ಲುಧಿಯಾನದಲ್ಲಿ ಹಾಗಲ್ಲ. ನವೆಂಬರ್ 5 ರಿಂದ ಲುಧಿಯಾನ ಬೆಳಗ್ಗೆಯಿಂದಲೂ ಕತ್ತಲಲ್ಲಿ ಮುಳುಗಿದೆ. ಜನರು ಟಾರ್ಚ್ ಹಿಡಿದು, ವಾಹನ ಸವಾರರು ಹೆಡ್ ಲೈಟ್ ಹಾಕಿಯೇ ಸಾಗುತ್ತಿದ್ದಾರೆ. ಲುಧಿಯಾನದ ಜನತೆ ಈ ಬಾರಿ ಆತಂಕದಿಂದಲೇ ದಿನ ದೂಡುತ್ತಿದ್ದಾರೆ. ಸೂರ್ಯನ ಬೆಳಕು ಕಾಣದೆ ಕಂಗಲಾಗಾಗಿದ್ದಾರೆ. ಇದೇ ವೇಳೆ ಬೆಳಗ್ಗೆಯಾದರೆ ಸೂರ್ಯನ ಕಿರಣ ಸ್ಪರ್ಶಿಸುತ್ತಿಲ್ಲ ಎಂದಾದರೆ ಬಹುದೊಡ್ಡ ಆಪತ್ತು ಕಾದಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಲುಧಿಯಾನದಲ್ಲಿ ಸೂರ್ಯನ ಬೆಳಕೇ ಬೀಳದಿರುವ ರೀತಿ ವಾತಾವರಣ ಬದಲಾಗಿದ್ದು ಸ್ವಯಂ ಕೃತ ಅಪರಾಧ. ಲುಧಿಯಾನದಲ್ಲಿ ಮಾಲಿನ್ಯ ಅಷ್ಟರಮಟ್ಟಿಗೆ ಸೂರ್ಯನ ಕಿರಣಗಳನ್ನು ತಡೆಯುತ್ತಿದೆ. ಲುಧಿಯಾನ ವಾಯು ಮಾಲಿನ್ಯ ವಿಪರೀತವಾಗಿದೆ. ಇತ್ತ ಮೋಡ ಕವಿದ ವಾತಾವರಣವಿರುವ ಕಾರಣ ಲುಧಿಯಾನ ಮದ್ಯಾಹ್ನ 12 ಗಂಟೆಯಾದರೂ ಕತ್ತಲಲ್ಲಿ ಮುಳುಗಿದೆ. ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಪಂಜಾಬ್ ಲುಧಿಯಾನ ವಾಯು ಮಾಲಿನ್ಯ ಕುರಿತು ಅಧ್ಯಯನ ನಡೆಸಿದೆ. ಈ ವೇಳೆ ಒಂದೆಡೆ ಧೂಳು, ಕಾರ್ಖಾನೆ, ವಾಹನಗಳ ಕಾರ್ಬನ್ ಜೊತೆಗೆ ದಟ್ಟ ಹೊಗೆ ಲುಧಿಯಾನದಲ್ಲಿ ಬಹುದೊಡ್ಡ ಸಮಸ್ಯೆ ತಂದಿಟ್ಟಿದೆ.
ಲುಧಿಯಾನದಲ್ಲಿ ಹೆಚ್ಚಿನ ರೈತರು ಕಳೆಗೆ ಬೆಂಕಿ ಹಾಕುವ ಪ್ರಕ್ರಿಯೆಯನ್ನು ಬಿಟ್ಟಿಲ್ಲ. ಕೋರ್ಟ್, ಸರ್ಕಾರ ಎಚ್ಚರಿಸಿದರೂ ಈ ಪದ್ಧತಿಯಿಂದ ರೈತರು ಹಿಂದೆ ಸರಿದಿಲ್ಲ. ಇದರ ಪರಿಣಾಮ ಲುಧಿಯಾನ ಕತ್ತಲಲ್ಲಿ ಮುಳುಗಿದೆ. ಹಲವರು ಇದು ಕೇಡುಗಾಲದ ಮುನ್ಸೂಚನೆ ಎಂದು ಎಚ್ಚರಿಸಿದ್ದಾರೆ. ಹೌದು, ಇದು ವಾತಾವರಣದಲ್ಲಿ ಆಗುತ್ತಿರುವ ಮಹತ್ವದ ಬದಲಾವಣೆ ಕೇಡುಗಾಲದ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : ವಿನಾಯಕ ವೆಂಕಟೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದ ’ಗೌರಿಶಂಕರ’ ಮುಹೂರ್ತ!
ಲುಧಿಯಾನದಲ್ಲಿನ ಪರಿಸ್ಥಿತಿ ಇತರ ನಗರಗಳೂ ಎದುರಿಸುವ ದಿನ ದೂರವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ದೆಹಲಿ ವಾಯು ಮಾಲಿನ್ಯದಿಂದ ತತ್ತರಿಸಿ ಹೋಗಿದೆ. ಈ ವಾಯು ಮಾಲಿನ್ಯ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಮುಂಬೈ ಸೇರಿದಂತೆ ಹಲವು ನಗರಗಳಿಗೂ ವ್ಯಾಪಿಸಿದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗುವುದು ಖಚಿತ ಎಂದು ತಜ್ಞರು ಹೇಳಿದ್ದಾರೆ.