ಭೋಪಾಲ್: ಮಧ್ಯಪ್ರದೇಶದ ಬಹುಜನ ಪಕ್ಷದ ಬೆತುಲ್ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಅಶೋಕ್ ಭಾಲವಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ನಡೆಯಬೇಕಿದ್ದ 2ನೇ ಹಂತದ ಮತದಾನವನ್ನ ಮುಂದೂಡಲಾಗಿದೆ.
ಭಾಲವಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ವಿಧಿವಶಾತ್ ಅಶೋಕ್ ಅವರು ರಸ್ತೆ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಏಪ್ರಿಲ್ 26ರಂದು ನಡೆಯಬೇಕಿದ್ದ 2ನೇ ಹಂತದ ಮತದಾನವನ್ನು ಮುಂದೂಡುತ್ತಿದ್ದೇವೆ ಎಂದಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಲಿ ಸಂಸದ ದುರ್ಗಾ ದಾಸ್ ಉಯಿಕೆಯವರನ್ನು ಬಿಜೆಪಿ ಮತ್ತೊಮ್ಮೆ ಬೇತುಲ್ನ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ನಿಂದ ರಾಮು ಟೇಕಂ ಸ್ಪರ್ಧೆ ಮಾಡುತ್ತಿದ್ದಾರೆ. ಏಪ್ರಿಲ್ 26ರಂದು ಟಿಕಮ್ಗಢ್, ದಾಮೋಹ್, ಖಜುರಾಹೊ, ಸತ್ನಾ, ರೇವಾ ಮತ್ತು ಹೊಶಂಗಾಬಾದ್ ಸ್ಥಾನಗಳೊಂದಿಗೆ 2ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬೇತುಲ್ ಮತದಾನ ಮಾಡಲು ನಿರ್ಧರಿಸಲಾಗಿತ್ತು.