ಮಹಾರಾಷ್ಟ್ರದಲ್ಲೀಗ ಎಲ್ಲ ಪಕ್ಷಗಳೂ ಗ್ಯಾರಂಟಿ ಘೋಷಣೆ ಮಾಡಿವೆ. ಅತ್ತ ಬಿಜೆಪಿ ನೇತೃತ್ವದ ಮಹಾಯುತಿನೂ ಘೋಷಣೆ ಮಾಡಿದೆ. ಇತ್ತ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿನೂ ಘೋಷಣೆ ಮಾಡಿದೆ. ಈ ಎರಡೂ ಪಕ್ಷಗಳು ಗ್ಯಾರಂಟಿ ಘೋಷಣೆ ಮಾಡಿದ್ದಾರಲ್ಲ, ಇಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರೋ ಗ್ಯಾರಂಟಿ ಇದ್ಯಲ್ಲ, ಅದಕ್ಕೆ ಕರ್ನಾಟಕ ಗ್ಯಾರಂಟಿನೇ ರೋಲ್ ಮಾಡೆಲ್.
ಕರ್ನಾಟಕದಲ್ಲಿ ಗ್ಯಾರಂಟಿಗಳನ್ನೆಲ್ಲ ಹೆಂಗೆ ಯಶಸ್ವಿಯಾಗಿ ಜಾರಿ ಮಾಡಿದ್ದೀವಿ ಗೊತ್ತಾ ಅಂತಾ ಹೇಳ್ಕೊಂಡೇ ಪ್ರಚಾರ ಮಾಡ್ತಿದೆ ಕಾಂಗ್ರೆಸ್. ಗೃಹಲಕ್ಷ್ಮಿ ಮಾಡಲ್ ನಾವ್ ಮಾಡಿದ್ಮೇಲೆನೇ ಬಿಜೆಪಿಯವರಿಗೆ ಜನರ ಕಷ್ಟ ಅರ್ಥ ಆಯ್ತು ಎನ್ನುವುದು ಕಾಂಗ್ರೆಸ್ ಪ್ರಚಾರದ ಸ್ಟೈಲಾಗಿದೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರೋ ಬಿಜೆಪಿ ನೇತೃತ್ವದ ಸರ್ಕಾರ ಮಹಿಳೆಯರಿಗೆ 1500 ರೂಪಾಯಿ ಕೊಡುತ್ತಿದ್ದಾರೆ. ನಾವು ಗೆದ್ರೆ 2100 ರೂಪಾಯಿ ಕೊಡ್ತೀವಿ ಅಂತಿದ್ದಾರೆ. ಅದಕ್ಕೆ ಕೌಂಟರ್ ಕೊಡ್ತಿರೋ ಕಾಂಗ್ರೆಸ್ 3000 ಕೊಡ್ತೀವಿ ಅಂತಿದ್ದಾರೆ. ಯುವಕರಿಗೆ ತಿಂಗಳಿಗೆ 4000 ಪ್ಲಸ್ 25 ಸಾವಿರ ರೂಪಾಯಿ ಇನ್ಷೂರೆನ್ಸ್ ಕೊಡಿಸ್ತೀವಿ ಅಂತಿದೆ ಕಾಂಗ್ರೆಸ್.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳೇ ಇಲ್ಲ ಅಂತಾ ಬಿಜೆಪಿ ಪ್ರಚಾರ ಮಾಡುತ್ತಿದೆ. ಅದನ್ನೆಲ್ಲ ನಂಬಬೇಡಿ ಅಂತಿದ್ದಾರೆ ಡಿಸಿಎಂ ಡಿ.ಕೆ ಶಿವಕುಮಾರ್, ಮಹಾರಾಷ್ಟ್ರದಲ್ಲಿ ಕರ್ನಾಟಕ ಗ್ಯಾರಂಟಿ ಯೋಜನೆಗಳ ಜಾಹೀರಾತನ್ನ ಪ್ರದರ್ಶನ ಮಾಡಿದ್ದಾರೆ.
ಪ್ರತೀ ಸಲ ಮಹಾರಾಷ್ಟ್ರ ಚುನಾವಣೆಯಲ್ಲಿ ಕನ್ನಡಿಗರು ಇರೋ, ಕನ್ನಡದ ಮತದಾರರು ಇರೋ ಕಡೆ ಮಾತ್ರ ಕರ್ನಾಟಕ ಲೀಡರ್ಸ್ ಪ್ರಚಾರ ಮಾಡುತ್ತಿದ್ದರು. ಈ ಸಲ ಹಾಗಾಗಿಲ್ಲ. ಮರಾಠಿಗರು ಇರೋ ಪ್ರದೇಶದಲ್ಲೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರೆಲ್ಲಾ ಹೋಗಿ ಪ್ರಚಾರ ಮಾಡ್ತಿದ್ದಾರೆ. ಅವರ ಈ ಪ್ರಚಾರಕ್ಕೆ, ಕರ್ನಾಟಕದ ಲೀಡರ್ಸ್ ಕೂಡಾ ಮಹಾರಾಷ್ಟ್ರದಲ್ಲಿ ನಾಯಕರಾಗೋಕೆ ಕಾರಣ ಆಗಿರೋದು ರಾಜ್ಯದ ಗ್ಯಾರಂಟಿ ಯೋಜನೆಗಳು. ರಾಜ್ಯದಲ್ಲಿ ಸಿದ್ದರಾಮಯ್ಯ & ಡಿ.ಕೆ ಶಿವಕುಮಾರ್ ಇಬ್ಬರೂ ಸಹ ಸೈನ್ ಹಾಕಿ ಗ್ಯಾರಂಟಿ ಕೊಟ್ಟಿದ್ರಲ್ಲ, ಅದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಮಾಡುತ್ತಿದ್ದಾರೆ.
ಮಹಾಯುತಿ ಗ್ಯಾರಂಟಿ :
- ಲಡ್ಕೀ ಬಹೆನ್ ಸ್ಕೀಂನಲ್ಲಿ ತಿಂಗಳಿಗೆ 2100 ರೂ.
- ವಿದ್ಯುತ್ ಬಿಲ್ ಶೇ.30 ರಿಯಾಯಿತಿ
- ರೈತರ ಸಾಲಮನ್ನಾ
- ರೈತರಿಗೆ ವಾರ್ಷಿಕ ಸಹಾಯಧನ 12 ರಿಂದ 15 ಸಾವಿರಕ್ಕೆ ಏರಿಕೆ
ಮಹಾ ವಿಕಾಸ್ ಅಘಾಡಿ ಗ್ಯಾರಂಟಿ
- ಮಹಿಳೆಯರಿಗೆ ಮಾಸಿಕ 3000 ರೂ. (ಗೃಹಲಕ್ಷ್ಮಿ ಮಾಡೆಲ್)
- ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಶಕ್ತಿ ಮಾಡೆಲ್)
- 25 ಲಕ್ಷ ಜೀವವಿಮೆ
- 3 ಲಕ್ಷದವರೆಗಿನ ರೈತರ ಸಾಲಮನ್ನಾ
- ಯುವಕರಿಗೆ ತಿಂಗಳಿಗೆ 4 ಸಾವಿರ ರೂ.