ಮಹಾವಿಕಾಸ್ ಅಘಾಡಿ (ಎಂವಿಎ) ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಎಂವಿಎ ಮಹಿಳೆಯರಿಗೆ ದೊಡ್ಡ ಘೋಷಣೆ ಮಾಡಿದೆ. ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 3000 ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ. ಮಹಿಳೆಯರು, ರೈತರು, ಯುವಕರು, ಆರೋಗ್ಯ, ಕೈಗಾರಿಕೆ, ಸಾಮಾಜಿಕ ನ್ಯಾಯ, ಉತ್ತಮ ಆಡಳಿತ ಮತ್ತು ನಗರಾಭಿವೃದ್ಧಿ ಸಮಸ್ಯೆಗಳ ಬಗ್ಗೆ ಕೆಲಸ ಮಾಡುವುದಾಗಿ ಮಹಾವಿಕಾಸ್ ಅಘಾಡಿ ಭರವಸೆ ನೀಡಿದೆ.
ಏನೆಲ್ಲ ಘೋಷಣೆ?
- ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ
- ವರ್ಷದಲ್ಲಿ ಆರು ಗ್ಯಾಸ್ ಸಿಲಿಂಡರ್ 500 ರೂ.ಗೆ ನೀಡುವ ಭರವಸೆ
- ಮಹಿಳೆಯರಿಗಾಗಿ ‘ಶಕ್ತಿ ಕಾನೂನು’ ಜಾರಿಗೆ ತರುವ ವಾಗ್ದಾನ
- 9 ರಿಂದ 16 ವರ್ಷದ ಬಾಲಕಿಯರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ
- ಮುಟ್ಟಿನ ದಿನಗಳಲ್ಲಿ ಎರಡು ದಿನ ರಜೆ ನೀಡುವ ಬಗ್ಗೆ ಯೋಚನೆ
- 3 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ
- ಯುವ ಪದವೀಧರ, ಸ್ನಾತಕೋತ್ತರ ಶಿಕ್ಷಣ ಪಡೆದವರಿಗೆ 4,000 ರೂ ಭತ್ಯೆ
- ಮಹಾರಾಷ್ಟ್ರದಲ್ಲಿ ಜಾತಿ ಗಣತಿ ನಡೆಸುವುದಾಗಿ ಭರವಸೆ
- ಪರಿಶಿಷ್ಟ ಜಾತಿ ಮತ್ತು ಪಂಗಡದ ಇಲಾಖೆಗಳ ಹಕ್ಕುಗಳಿಗಾಗಿ ಬಜೆಟ್