ಸ್ವಲ್ಪ ದಿನದ ಹಿಂದಷ್ಟೇ ರೈತನ ಬಟ್ಟೆ ಕೊಳಕ್ಕಾಗಿದೆ ಎಂದು ಮೆಟ್ರೋದಲ್ಲಿ ಪ್ರಯಾಣಿಸಲು ನಿರಾಕರಿಸಿದ್ದ, ಬಿಎಂಆರ್ ಸಿಎಲ್, ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಬಟ್ಟೆ ಕೊಳೆಯಾಗಿದೆ ಅಂತ ಮೊಟ್ರೋ ಸಿಬ್ಬಂದಿ ಕಾರ್ಮಿಕನನ್ನು ತಡೆದು, ನಿಲ್ಲಿಸಿ ಅಪಮಾನಿಸಿದ್ದಾರೆ. ಈ ಘಟನೆ ಬೆಂಗಳೂರಿನ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಶರ್ಟ್ನ ಗುಂಡಿಯನ್ನ ಹಾಕಿಕೊಂಡು, ನೀಟಾಗಿ ಬಾ, ಇಲ್ಲದಿದ್ದರೆ ಒಳಗೆ ಪ್ರವೇಶವಿಲ್ಲ ಅಂತ ಧಿಮಾಕಿನಿಂದ ಉತ್ತರ ನೀಡಿದ್ದಾರೆ. ಇದನ್ನು ಕಂಡ ಜನರು ಮೆಟ್ರೋ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಭದ್ರತಾ ಸಿಬ್ಬಂದಿಯ ಈ ವರ್ತನೆಗೆ ನೆಟ್ಟಿಗರು ಸಹ ಕಿಡಿಕಾರುತ್ತಿದ್ದಾರೆ.