ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ತುಮಕೂರಲ್ಲಿ ಪ್ರಚಾರ ನಡೆಸಿದ ನಂತರ, ಸಚಿವ ಜಮೀರ್ ಅಹ್ಮದ್ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೊರಟ್ಟಿದರು. ಈ ವೇಳೆ ಮಾರ್ಗಮಧ್ಯೆದಲ್ಲೇ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಚಿಕಿತ್ಸೆಗಾಗಿ ಜಮೀರ್ ಅಹ್ಮದ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಜಮೀರ್ ಅವರನ್ನು ದಾಖಲು ಮಾಡಲಾಗಿದೆ. ಮೊದಲಿಗೆ ಜಮೀರ್ ಗೆ ಬೆನ್ನುನೋವು ಕಾಣಿಸಿಕೊಂಡಿತ್ತು, ನಂತರ ಎದೆನೋವು ನೋವು ಕಾಣಿಸಿಕೊಂಡಿದೆ. ಜಮೀರ್ ಅವರಿಗೆ ಇಸಿಜಿ ಮತ್ತು ಎಕೋ ಪರೀಕ್ಷೆ ನಡೆಸಲಾಗುತ್ತಿದೆ ಅಂತ ಹೃದ್ರೋಗ ತಜ್ಞ ಡಾ. ಕಾರ್ತಿಕ್ ತಿಳಿಸಿದ್ದಾರೆ.