ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ಸಿಕ್ತಿಲ್ಲ ಅಂತಾ ಕೆಲ ಕಾಂಗ್ರೆಸ್ ಶಾಸಕರೇ ಬಹಿರಂಗವಾಗಿ ಅಸಮಧಾನ ಹೊರ ಹಾಕ್ತಿದ್ದಾರೆ. ಇನ್ನು ಕೆಲವು ಸರ್ಕಾರವಂತು ಗ್ಯಾರಂಟಿ ಯೋಜನೆಗಳನ್ನ ಸ್ಥಗಿತ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಿ ಅಂತಾ ಸಿಎಂ ಅವರಿಗೆ ಮನವಿ ಸಹ ಮಾಡಿದ್ದಾರೆ ಈ ಮಧ್ಯೆ ಮೊನ್ನೆ ಮೊನ್ನೆಯಷ್ಟೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಶಾಸಕರೊಬ್ಬರ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ದೊರೆತಿದೆ.
ಸಂಡೂರು ಚನ್ನಪಟ್ಟಣ ಶಿಂಗ್ಗಾವಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತ್ರತ್ವದಲ್ಲಿ ಮತದಾರರಿಗೆ ಅಭಿನಂದನಾ ಸಮಾರಂಭ ನಡೆಯುತ್ತಿದೆ. ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಶಾಸಕಿ ಅನ್ನಪೂರ್ಣ ತುಕಾರಾಂ ರವರ ಮನವಿಗೆ ಸ್ಪಂದಿಸಿ ಅಭಿನಂದನಾ ಸಮಾವೇಶದ ವೇದಿಕೆಯಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ 2 ಸಾವಿರ ಮನೆಗಳ ಹಂಚಿಕೆಗೆ ಆದೇಶ ಪತ್ರ ವಿತರಣೆ ಮಾಡಿದ್ದಾರೆ.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಂಡೂರು ಜನತೆಗೆ ಅಭಿನಂದಿಸಿ ಭಾಷಣ ಮಾಡುವ ವೇಳೆ ಸಂಡೂರು ಕ್ಷೇತ್ರಕ್ಕೆ ವಸತಿ ಇಲಾಖೆಯಿಂದ ಹೆಚ್ಚುವರಿಯಾಗಿ 2 ಸಾವಿರ ಮನೆಗಳನ್ನು ನೀಡುವುದಾಗಿ ಘೋಷಿಸಿದರು. ಈಗಾಗಲೇ 2,172 ಮನೆಗಳನ್ನು ನೀಡಲಾಗಿದೆ. ಸಂಡೂರಿನಲ್ಲಿ ಬಡವರು ಹೆಚ್ಚಾಗಿರುವುದರಿಂದ ಮತ್ತು ನಂಜುಂಡಪ್ಪ ಅವರ ವರದಿಯಲ್ಲಿ ಹಿಂದುಳಿದ ತಾಲ್ಲೂಕಿನ ಪಟ್ಟಿಯಲ್ಲಿ ಇರುವುದರಿಂದ ಹೆಚ್ಚುವರಿಯಾಗಿ 2000 ಮನೆಗಳನ್ನು ನೀಡಲಾಗುವುದು ಎಂದು ಘೋಷಿಸಿದರು.