ಕೋಲಾರ : ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿಗೆ ಹೋಲಿಸಿ ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.ಕೋಲಾರದಲ್ಲಿ ಪ್ರಚಾತ ಸಭೆಯಲ್ಲಿ ಮಾತನಡಿದ ಅವರು ಮೋದಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ…ಜೂನ್ 4ಕ್ಕೆ ನಾವು ಕಾಯುತ್ತಿದ್ದೇವೆ, ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ. ಇಂದಿರಾಗಾಂಧಿ ಕೂತಿದ್ದ ಸೀಟಲ್ಲಿ ಬಂದು ಕೂತುಬಿಟ್ಟೆ. ಎಲ್ಲಾ ಜಾತಿ ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು ಇಂದಿರಾ ಗಾಂಧಿ ಎಂತಹವರ ಜಾಗಕ್ಕೆ ಎಂತಹವನು ಬಂದು ಕೂತಿದ್ದಾನೆ ಅಂತ ರಮೇಶ್ ಕುಮಾರ್ ಕಿಡಿಕಾರಿದ್ದಾರೆ