ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಮೈಸೂರಿನಲ್ಲಿ ಸಮಾವೇಶ ಮುಗಿಸಿದ ನಂತರ, ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಂಗಳೂರಿನಲ್ಲಿ ವಿಜಯ ಸಂಕಲ್ಪ ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಪೋಲಿಸರ ಏಳು ಸುತ್ತಿನ ಕೋಟೆಯನ್ನೇ ನಿರ್ಮಿಸಿದ್ದಾರೆ.
ಮಂಗಳೂರು ನಗರದ ನಾರಾಯಣಗುರು ವೃತ್ತದಿಂದ ರೋಡ್ಶೋ ಆರಂಭವಾಗಲಿದ್ದು, ಮಂಜೇಶ್ವರ ಗೋವಿಂದ ಪೈ ವೃತ್ತದಲ್ಲಿ ಕೊನೆಗೊಳ್ಳಲಿದೆ. ರೋಡ್ ಶೋನಲ್ಲಿ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದು ಖಾಕಿ ಬಿಗಿ ಭದ್ರತೆ ಕೈಗೊಂಡಿದೆ.
ಖಾಕಿ ಕಣ್ಗಾವಲು..ಹೇಗಿದೆ ಸರ್ಪಗಾವಲು..?
ಎಡಿಜಿಪಿ, ಐಜಿಪಿ ನೇತೃತ್ವದಲ್ಲಿ ಭದ್ರತೆ
6 ಎಸ್ಪಿ, 2 ಡಿಸಿಪಿ, 10 ಡಿವೈಎಸ್ಪಿ,
6 ಎಸಿಪಿ, 55 ಇನ್ಸ್ಪೆಕ್ಟರ್, 120 ಪಿಎಸ್ಐ,
147 ಎಎಸ್ಐ, 1400 ಹೆಡ್ ಕಾನ್ಸ್ಟೆಬಲ್ಗಳು,
92 ಗೃಹರಕ್ಷಕರು, 15 ಕೆಎಸ್ಆರ್ಪಿ ತುಕಡಿ,
5 ಸಿಎಆರ್ ತುಕಡಿ, 2 ಸಿಆರ್ಪಿಎಫ್ ತುಕಡಿ,
4 ಎಎಸ್ಸಿ ತಂಡ, 1 ಬಿಡಿಡಿಎಸ್ ತಂಡ,
30 ಡಿಎಫ್ಎಂಡಿ / ಎಚ್ಎಚ್ಎಂಡಿ,
34 ಸೆಕ್ಟರ್ ಮೊಬೈಲ್ಗಳು ಕರ್ತವ್ಯಕ್ಕೆ ನಿಯೋಜನೆ
ರೋಡ್ ಶೋ ಮಾರ್ಗದಲ್ಲಿ 25ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ